ಬೆಂಗಳೂರು: ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ನಡೆಯುತ್ತಿದೆ. ಜೂನ್.3ರಂದು ಮತದಾನಕ್ಕೂ ದಿನಾಂಕ ನಿಗದಿ ಪಡಿಸಲಾಗಿದೆ. ಈ ನಡುವೆ ಚುನಾವಣಾ ನೀತಿ ಸಂಹಿತೆಯನ್ನು ಡೋಂಟ್ ಕೇರ್ ಎಂದಿರುವಂತ ಶಿಕ್ಷಣ ಇಲಾಖೆಯು KPSC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ನಡೆಸಲಾಗಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಮ್ಯಾಲ್ಯಮಾಪನ ಕಾರ್ಯಕ್ಕೆ ಉಲ್ಲೇಖಿತ ಪತ್ರದಲ್ಲಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರನ್ನು ನಿಯೋಜಿಸಲು ಸೂಚಿಸಲಾಗಿರುತ್ತದೆ ಎಂದಿದೆ.
ಇನ್ನೂ ಶಿಕ್ಷಕರನ್ನು ದಿ:29-05-2024ರಿಂದ 05-06-2024ರವರೆಗೆ (ದಿ:02-06-2024ನ್ನು ಹೊರತುಪಡಿಸಿ) ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಕೇಂದ್ರ ಕಛೇರಿ ಉದ್ಯೋಗ ಸೌಧ, 4ನೇ ಮಹಡಿಯ ಸಭಾಂಗಣದಲ್ಲಿ ನಡೆಯಲಿರುವ ಸದರಿ ಮ್ಯಾಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿದ್ದು ಸದರಿ ಶಿಕ್ಷಕರು ದಿ:29-05-2024ರಂದು ಪೂರ್ವಾಹ್ನ 10.15ಕ್ಕೆ ತಪ್ಪದೇ ಹಾಜರಾಗಲು ಆದೇಶಿಸಿದೆ.
ಅಂದಹಾಗೇ ಜೂನ್.3ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಪರಿಷತ್ ಚುನಾವಣಾ ಕಾರ್ಯದಲ್ಲಿ ಅನೇಕ ಶಿಕ್ಷಕರು ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ಮತದಾನಕ್ಕೂ ಅವಕಾಶ ಮಾಡಿಕೊಡದೇ ಶಿಕ್ಷಣ ಇಲಾಖೆಯಿಂದ ಕೆಪಿಎಸ್ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಿರೋದು ಮಹಾ ಎಡವಟ್ಟು ಮಾಡಿದಂತೆ ಆಗಿದೆ.
BREAKING: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ: ಮನೆ ಬಾಗಿಲು ತೆರೆಯದಿದ್ದಕ್ಕೆ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್
ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ‘ಬಿಭವ್ ಕುಮಾರ್’ಗೆ 3 ದಿನ ಪೊಲೀಸ್ ಕಸ್ಟಡಿಗೆ