ಉತ್ತರ ಪ್ರದೇಶ: ಶಿಕ್ಷಣ ಇಲಾಖೆಯ ಸಹಾಯಕ ಅಕೌಂಟೆಂಟ್ ಒಬ್ಬರು ವ್ಯಕ್ತಿಯೊಬ್ಬರಿಂದ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಸೋಧಾ ಅಯೋಧ್ಯೆಯಲ್ಲಿ ಈ ಘಟನೆ ನಡೆದಿದೆ. ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಸಹಾಯಕ ಅಕೌಂಟೆಂಟ್ ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ವಿಜಿಲೆನ್ಸ್ ಅಧಿಕಾರಿಗಳಿಗೆ ಅಕೌಂಟೆಂಟ್ ವಿರುದ್ಧ ದೂರು ನೀಡಿದ್ದರು. ನಿನ್ನೆ ವ್ಯಕ್ತಿ ಅಯೋಧ್ಯಾ ಬ್ಲಾಕ್ ಎಜುಕೇಷನ್ ಕಚೇರಿಯ ಅಕೌಂಟೆಂಟ್ ಗೆ ಒಂದು ಲಕ್ಷ ಲಂಚದ ಹಣವನ್ನು ನೀಡೋದಕ್ಕೆ ತೆರಳಿದ್ದರು. ಹಣವನ್ನು ವ್ಯಕ್ತಿಯಿಂದ ಪಡೆದ ಕೆಲವೇ ಕ್ಷಣಗಳಲ್ಲಿ ವಿಜಿಲೆನ್ಸ್ ತಂಡದ ಅಧಿಕಾರಿ, ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.
ಒಟ್ಟಾರೆಯಾಗಿ ಉತ್ತರ ಪ್ರದೇಶದ ಮಸೋಧಾ ಅಯೋಧ್ಯಾ ಬ್ಲಾಕ್ ಎಜುಕೇಶನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಅಕೌಂಟೆಂಟ್ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ವಿಚಕ್ಷಣಾ ತಂಡ ಬಂಧಿಸಿದೆ. ಆ ವೀಡಿಯೋ ಈ ಕೆಳಗಿದೆ ನೋಡಿ.
Vigilance team arrested Assistant Accountant while he was Taking Bribe of Rs 1 Lakh, he was posted in Block Education Office, Masodha Ayodhya UP
pic.twitter.com/QIMraez8ea— Ghar Ke Kalesh (@gharkekalesh) September 7, 2024
ಮಹಾರಾಷ್ಟ್ರದಲ್ಲಿ ಧಾರುಣ ಘಟನೆ: ಬೋಡ್ ಮುಗುಚಿ ಇಬ್ಬರು ಯೋಧರು ದುರ್ಮರಣ
BREAKING: ಧಾರವಾಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ನಾಲ್ವರಿಗೆ ಗಂಭೀರ ಗಾಯ