ಬೆಂಗಳೂರು: 50 ಕೋಟಿ ರೂಪಾಯಿಗೆ ವಿಶ್ವದ ಅತೀ ದುಬಾರಿ ನಾಯಿ ಖರೀದಿಸಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಂತ ಸತೀಶ್ ಎಂಬುವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ.
ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಎಂಬುವರು 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವಂತ ನಾಯಿಯನ್ನು ಖರೀದಿಸಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮಾಹಿತಿ ಆಧರಿಸಿ ಇಂದು ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಂತ ಇಡಿ ಅಧಿಕಾರಿಗಳು, ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಸತೀಶ್ ಖರೀದಿಸಿದಂತ ನಾಯಿ 50 ಕೋಟಿ ಹಣದ್ದಲ್ಲ ಎಂಬ ಸತ್ಯ ಬಯಲಾಗಿದೆ.
ಅಂದಹಾಗೆ ಸತೀಶ್ ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವಂತ ತೋಳನಾಯಿ ಎಂಬುದಾಗಿ ಕರೆಯುವಂತ ನಾಯಿಯನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಇದು ವಿಶ್ವದಲ್ಲೇ ಅತೀ ದುಬಾರಿಯಾದಂತ ನಾಯಿಯಾಗಿದೆ. ಇದರ ಬೆಲೆ 50 ಕೋಟಿ ಅಂತ ತಿಳಿಸಿದ್ದರು. ಆದರೇ ಅಷ್ಟು ಬೆಲೆಯದ್ದಲ್ಲ ಎಂಬುದಾಗಿ ಇಡಿ ದಾಳಿಯಲ್ಲಿ ತಿಳಿದು ಬಂದಿದೆ. ಇಡಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ಶಿವಮೊಗ್ಗ: ಏ.18ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!