ನವದೆಹಲಿ: ಬಿಜೆಪಿ ನಾಯಕಿ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಏಪ್ರಿಲ್ 11, 2024ರ ಸಂಜೆ.5 ಗಂಟೆಯೊಳಗೆ ಪ್ರತಿಕ್ರಿಯೆ ಕೋರಲಾಗಿದೆ.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಹಿಳೆಯರ ಬಗ್ಗೆ ಗೌರವಯುತ ಸಾರ್ವಜನಿಕ ಸಂವಾದವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಐಎನ್ ಸಿ ಅಧ್ಯಕ್ಷರಿಂದ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಒತ್ತಾಯಿಸಿದೆ; ಚುನಾವಣಾ ಪ್ರಚಾರವು ಮಹಿಳೆಯರಿಗೆ ಯಾವುದೇ ರೀತಿಯ ಅವಮಾನದ ವೇದಿಕೆಯಾಗಲು ಅವಕಾಶ ನೀಡಬಾರದು ಎಂದು ಪುನರುಚ್ಚರಿಸಿದರು.
ಎಲ್ಲಾ ಪಕ್ಷದ ನಾಯಕರು ಸಾರ್ವಜನಿಕ ಸಂವಾದದ ಸಮಯದಲ್ಲಿ ಮಹಿಳೆಯರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವ ಆಯೋಗದ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷ ಕೈಗೊಂಡ ಕ್ರಮಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಏಪ್ರಿಲ್ 11, 2024 ರೊಳಗೆ ಪ್ರತಿಕ್ರಿಯಿಸಬೇಕು ಎಂದು ಚುನಾವಣಾ ಆಯೋಗ ನೀಡಿರುವಂತ ನೋಟಿಸ್ ನಲ್ಲಿ ತಿಳಿಸಲಾಗಿದೆ.
ECI issues notice to Congress leader Randeep Surjewala for his comments against BJP leader Hema Malini; response sought by April 11, 2024 (5 pm)
ECI demands action from the INC President on ensuring respectful public discourse towards women by party leaders and functionaries;…
— ANI (@ANI) April 9, 2024