ನವದೆಹಲಿ: ಈಗಾಗಲೇ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಒಮ್ಮೆ ಕೇಂದ್ರ ಚುನಾವಣಾ ಆಯೋಗವು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ಇಂದು ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತ ಎಲ್ಲಾ ಮಾಹಿತಿಯನ್ನು ಎಸ್ ಬಿಐ, ಸಿಇಸಿಗೆ ಸಲ್ಲಿಸಿದ ಬೆನ್ನಲ್ಲೇ, ತನ್ನ ವೆಬ್ ಸೈಟ್ ನಲ್ಲಿ ಚುನಾವಣಾ ಆಯೋಗ ಎಲ್ಲಾ ಚುನಾವಣಾ ಬಾಂಡ್ ಮಾಹಿತಿಯನ್ನು ಪ್ರಕಟಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಚುನಾವಣಾ ಆಯೋಗವು, ಫೆಬ್ರವರಿ 15, ಮಾರ್ಚ್ 11, 2024 ಮತ್ತು ಮಾರ್ಚ್ 18, 2024 ರ ಆದೇಶದಲ್ಲಿ (2017 ರ ಡಬ್ಲ್ಯೂಪಿಸಿ ಸಂಖ್ಯೆ 880 ರ ವಿಷಯದಲ್ಲಿ) ಒಳಗೊಂಡಿರುವ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಡೇಟಾವನ್ನು ಇಂದು ಅಂದರೆ ಮಾರ್ಚ್ 21, 2024 ರಂದು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಒದಗಿಸಿದೆ ಎಂದಿದೆ.
ಭಾರತದ ಚುನಾವಣಾ ಆಯೋಗವು ಎಸ್ಬಿಐನಿಂದ ಪಡೆದ ಚುನಾವಣಾ ಬಾಂಡ್ಗಳ ಡೇಟಾವನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ಎಸ್ಬಿಐನಿಂದ ಪಡೆದ ಡೇಟಾವನ್ನು https://www.eci.gov.in/candidate-politicalparty ನಲ್ಲಿ ಪ್ರಕಟಿಸಲಾಗಿದೆ. ಅದನ್ನು ವೀಕ್ಷಿಸಬಹುದು ಎಂಬುದಾಗಿ ತಿಳಿಸಿದೆ.
ಶಿವಮೊಗ್ಗ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಗಮನಿಸಿ: ಕೊಂಕಣ ರೈಲ್ವೆಯಿಂದ ‘ಮಾನ್ಸೂನ್ ರೈಲು ವೇಳಾಪಟ್ಟಿ’ ಜಾರಿ, ಇಲ್ಲಿದೆ ಡೀಟೆಲ್ಸ್