ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕರಿಬೇವು ಇಲ್ಲದೇ ಅಡುಗೆ ಸಂಪೂರ್ಣವಾಗುವುದಿಲ್ಲ. ಕರಿಬೇವು ಇಲ್ಲದೇ ಅಡುಗೆಯೇ ಇಲ್ಲ ಅನ್ನಿ. ಒಗ್ಗರಣೆಗೆ ಕರಿಬೇವು ಹಾಕಿದ್ರೆ ಅದರ ಘಮನೇ ಬೇರೆ ಮತ್ತು ಇದು ಅಡುಗೆಗೆ ಹೆಚ್ಚು ರುಚಿಯನ್ನು ನೀಡುತ್ತದೆ. ಅಡುಗೆಗೆ ಅಲ್ಲದೇ ಕರಿಬೇವನ್ನು ಹಸಿಯಾಗಿ ತಿಂದರೆ ದೇಹಕ್ಕೆ ಅನೇಕ ಲಾಭಗಳಿವೆ, ಅವುಗಳೆಂದರೆ
ನಿತ್ಯವೂ ರಾತ್ರಿ ಮಲಗುವ ಮುನ್ನ ಹಸಿ ಕರಿಬೇವನ್ನು ಸೇವಿಸಿದರೆ ಯಕೃತ್‌ನ ಆರೋಗ್ಯ ವೃದ್ಧಿಯಾಗುತ್ತದೆ. ಯಕೃತ್ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿದ್ದರೆ ಪ್ರತಿನಿತ್ಯ ತಪ್ಪದೇ ರಾತ್ರಿ ಹಸಿ ಕರಿಬೇವು ತಿನ್ನಿ. ಹೀಗೆ ಮಾಡಿದರೆ ಬಹು ಕಾಲದ ಯಕೃತ್ ಸಮಸ್ಯೆ ಕ್ರಮೇಣವಾಗಿ ವಾಸಿಯಾಗುತ್ತದೆ. ಅಲ್ಲದೇ ಕರಿಬೇವು ಲಿವರ್ ಸಿರೋಸಿಸ್ ಅಪಾಯವನ್ನೂ ಕಡಿಮೆ ಮಾಡುತ್ತದೆ.
ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ಕರಿಬೇವಿನ ರಸಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸ ಸೇರಿಸಿ ಬೆಲ್ಲದ ಜೊತೆ ಸೇವಿಸಿದರೆ ಬೇಗನೇ ವಾಸಿಯಾಗುತ್ತದೆ. ಇದನ್ನು ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಕರಿಬೇವಿನಲ್ಲಿ ರಂಜಕ, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಎ ಕಬ್ಬಿಣ ಇನ್ನಿತರ ಪೋಷಕಾಂಶಗಳಿವೆ. ಇದು ಯಕೃತ್ ಸಮಸ್ಯೆಗೆ ಪರಿಹಾರ ನೀಡುವುದಲ್ಲದೇ ಜೀರ್ಣಕ್ರಿಯೆಯನ್ನೂ ಸರಾಗಗೊಳಿಸುತ್ತದೆ. ಇನ್ನು ಹೊಟ್ಟೆ ನೋವಿಗೆ ಹಸಿ ಕರಿಬೇವು ತುಂಬಾ ಪರಿಣಾಮಕಾರಿಯಾದ ಮನೆಮದ್ದು. ಹೊಟ್ಟೆಗೆ ಸಂಬಂಧಿಸಿದ ಮಲಬದ್ಧತೆ, ಆಮ್ಲೀಯತೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮಜ್ಜಿಗೆಯೊಂದಿಗೆ ಕರಿಬೇವಿನ ಸೇವನೆ ನಿತ್ಯವೂ ರೂಢಿಯಲ್ಲಿರಲಿ.
ಬೆಳಗ್ಗೆ ತುಳಸಿ ಎಲೆಯೊಂದಿಗೆ ಒಂದೆರಡು ಹಸಿ ಕರಿಬೇವಿನ ಎಲೆಯನ್ನೂ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ. ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ತಗ್ಗಿಸುತ್ತದೆ.