ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೀಟ್‌ರೂಟ್‌ನ್ನು ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೆಷ್ಟೋ ಜನ ಬೀಟ್‌ರೂಟ್ ಎಂದರೆ ಮಾರುದ್ದ ಸರೆಯುತ್ತಾರೆ. ಹೀಗೆ ಬೀಟ್‌ರೂಟ್‌ನಿಂದ ದೂರವಿದ್ದವರು ಅದೆಷ್ಟೋ ಪೋಷಕಾಂಶಗಳಿಂದ ವಂಚಿತರಾಗಿದ್ದಾರೆ ಅಂತ ಅರ್ಥ. ಬೀಟ್‌ರೂಟ್ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಂಡ ನೀವು ಇನ್ನು ಮುಂದೆ ಬೀಟ್‌ರೂಟ್ ಸೇವೆಯನ್ನು ಪ್ರಾರಂಭಿಸುತ್ತೀರಿ ಎಂದು ಆಶಿಸುತ್ತಾ ಈ ಲೇಖನವನ್ನು ಮುಂದುವರೆಸುತ್ತೇವೆ.
ಬೀಟ್‌ರೂಟ್‌ನಲ್ಲಿ ವಿಟಮಿನ್ ಎ, ಸಿ ಕ್ಯಾಲ್‌ಶಿಯಮ್, ಪೊಟ್ಯಾಷಿಯಂ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಒಂದು ಸೂಪರ್ ಫುಡ್ ಎಂದರೂ ತಪ್ಪಾಗಲಾರದು.
ಬೀಟ್‌ರೂಟ್‌ನಲ್ಲಿರುವ ಉತ್ತಮ ಪೋಷಕಾಂಶಗಳು ದೇಹವನ್ನು ಸದಾ ಸದೃಢವಾಗಿರಿಸುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ಬೀಟ್‌ರೂಟ್ ಸೇವಿಸಬೇಕು ಅದು ಸಲಾಡ್ ರೂಪದಲ್ಲೇ ಆಗಿರಲಿ, ಅಥವಾ ಜ್ಯೂಸ್ ಇನ್ನಾವುದೇ ರೂಪದಲ್ಲಿ ಆಗಿರಲಿ.
ಯಾರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅಂತವರು ಬೀಟ್‌ರೂಟ್ ಅನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.
ಬೀಟ್‌ರೂಟ್‌ಅನ್ನು ಸೂಪರ್ ಫುಡ್ ಎಂದು ಹೇಳಲಾಗುತ್ತದೆ. ಹಾಗಾಗಿ ಬೆಳಗಿನ ಉಪಹಾರದ ಮೊದಲು ಇದನ್ನು ಸಲಾಡ್‌ನಲ್ಲಿ ಸೇವಿಸಬೇಕು. ಹೀಗೆ ತಿಂಡಿಯ ಮುಂಚೆ ಇದನ್ನು ಸೇವಿಸಿದರೆ ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅದನ್ನು ಸರಿದೂಗಿಸುತ್ತದೆ.
ಬೀಟ್‌ರೂಟ್ ತಿಂದರೆ ದೇಹದಲ್ಲಿ ರಕ್ತದ ಕಣಗಳನ್ನು ಹೆಚ್ಚುತ್ತವೆ. ಯಾರಿಗೆ ನಿಶಕ್ತಿ ಸಮಸ್ಯೆ ಇರುತ್ತದೆಯೋ ನಿತ್ಯವೂ ಬೀಟ್‌ರೂಟ್ ಜ್ಯೂಸ್ ಸೇವಿಸಿದರೆ ದೇಹಕ್ಕೆ ಶಕ್ತಿ ಉಂಟಾಗಿ ನವಚೈತನ್ಯ ನೀಡುತ್ತದೆ. ವಾಂತಿ, ವಾಕರಿಕೆ, ತಲೆನೋವು ಇದ್ದವರು ಬಿಟ್‌ರೂಟ್ ಜ್ಯೂಸ್‌ಗೆ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ನಿವಾರಣೆಯಾಗುತ್ತದೆ.
ಬೀಟ್‌ರೂಟ್ ನಿರಂತರವಾಗಿ ಸೇವಿಸುತ್ತಾ ಬಂದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಬೀಟ್‌ರೂಟ್ ಚರ್ಮಕ್ಕೆ ಸಂಬಂಧಿಸಿದ ಎಲ್ಲ ರೋಗಗಳಿಗೂ ನಿವಾರಣೆ ನೀಡುತ್ತದೆ. ದೇಹಕ್ಕೆ ನಿರ್ಜಲೀಕರಣದ ಸಮಸ್ಯೆ ಇದ್ದರೆ ಇದರ ಜ್ಯೂಸ್ ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.
ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಗೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಹಾಗು ಮಲಬದ್ಧತೆ ಉಂಟಾಗುವುದಿಲ್ಲ. ಇದು ದೇಹಕ್ಕೆ ಸರಿ ಪ್ರಮಾಣದಲ್ಲಿ ಆಕ್ಸಿಜನ್ ನೀಡಿತ್ತದೆ. ಗರ್ಭಿಣಿಯರು ಇದರ ಜ್ಯೂಸ್ ಸೇವಿಸಿವುದರಿಂದ ದೇಹಕ್ಕೆ ಪೋಲಿಕ್ ಆಸಿಡ್‌ಅನ್ನು ಪಡೆಯಬಹುದು. ಒಟ್ಟಾರೆ ನಮ್ಮ ದೇಹದ ಆರೋಗ್ಯ ಸಮತೋಲನದಲ್ಲಿ ಇರಿಸಲು ಬೀಟ್‌ರೂಟ್ ಸೇವನೆ ಉತ್ತಮ ಆಹಾರ ಪದಾರ್ಥವಾಗಿದೆ.