ಕಾಠ್ಮಂಡು: ನೇಪಾಳದ ವಾಯುವ್ಯ ಭಾಗದ ಸುದೂರಪಶ್ಚಿಮ ಪ್ರಾಂತ್ಯದಲ್ಲಿ ಗುರುವಾರ (ಮಾರ್ಚ್ 26, 2026) ಬೆಳಿಗ್ಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದ್ದು, ಗಡಿ ಜಿಲ್ಲೆಯಾದ ದಾರ್ಚುಲಾದಲ್ಲಿ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ (NEMRC) ತಿಳಿಸಿದೆ.
ಸಮಯ: ಗುರುವಾರ ಬೆಳಿಗ್ಗೆ 8:32ಕ್ಕೆ (ಸ್ಥಳೀಯ ಸಮಯ).
ಕೇಂದ್ರಬಿಂದು: ದಾರ್ಚುಲಾ ಜಿಲ್ಲೆಯ ಮುರೈ ಪ್ರದೇಶದ ಸುತ್ತಮುತ್ತ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ.ದಾರ್ಚುಲಾ ಜಿಲ್ಲೆಯ ಜೊತೆಗೆ ನೆರೆಯ ಬೈತಡಿ ಮತ್ತು ಬಜಾಂಗ್ ಜಿಲ್ಲೆಗಳಲ್ಲೂ ಲಘು ಕಂಪನದ ಅನುಭವವಾಗಿದೆ.
ಭೂಕಂಪದಿಂದಾಗಿ ಈವರೆಗೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಕಂಪನದ ಅನುಭವವಾಗುತ್ತಿದ್ದಂತೆಯೇ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಮನೆಗಳಿಂದ ಹೊರಬಂದರು. ಪರ್ವತ ಪ್ರದೇಶಗಳಲ್ಲಿ ಸಣ್ಣಪುಟ್ಟ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತವು ನಿಗಾ ಇರಿಸಿದೆ.








