ಜಕಾರ್ತ (ಇಂಡೋನೇಷ್ಯಾ): ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದಲ್ಲಿ ಇಂದು ಮುಂಜಾನೆ 4.7-ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

“ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದಲ್ಲಿ 23-09-2022(ಇಂದು ಮುಂಜಾನೆ) ರಂದು 01:06 ಗಂಟೆಗೆ ಭೂಮಿಯಿಂದ 10 ಕಿಮೀ ಆಳದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಟ್ವೀಟ್ ಮಾಡಿದೆ.

ಭೂಕಂಪದಿಂದಾದ ಹಾನಿ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಅಂದ್ರೆ, ಆಗಸ್ಟ್ 23 ರಂದು ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯವಾದ ಬೆಂಗ್‌ಕುಲುದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿತು.

BIGG NEWS : ದೇಶಾದ್ಯಂತ ‘NIA’ ಮಹಾಬೇಟೆ : 15 ರಾಜ್ಯಗಳ 93 ಕಡೆ ದಾಳಿ : ‘ಪಿಎಫ್ಐ’ ಕಚೇರಿಗಳಿಗೆ ಬೀಗಮುದ್ರೆ  

‘ಬಿಎಂಎಸ್’ ಟ್ರಸ್ಟ್ ಖಾಸಗಿ ಪಾಲು : ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿ : ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

BIGG NEWS : ಅಕ್ರಮ ಶಿಕ್ಷಕರ ನೇಮಕಾತಿ : ಆರೋಪಿಗಳಿಗೆ ಭ್ರಷ್ಟಾಚಾರ ತಡೆ ಕಾಯಿದೆ ಉರುಳು

Share.
Exit mobile version