ನವದೆಹಲಿ/ಬೆಂಗಳೂರು : ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ಗುರುವಾರ ಮಹಾ ಭೇಟೆ ನಡೆಸಿದೆ.

ಹೌದು, ಉಗ್ರ ಸಂಘಟನೆಗಳೊಂದಿಗೆ ನಂಟು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಫ್ರಂಟ್ ಆಫ್ ಇಂಡಿಯ ಮತ್ತಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳಿಗೆ ಶಾಕ್ ನೀಡಿದೆ.

ದೇಶದ 15 ರಾಜ್ಯಗಳ 93 ಕಡೆ ಎನ್ ಐ ಎ ದಾಳಿ ನಡೆಸಿದ್ದು, ಪಿಎಫ್ಐ, ಎಸ್ ಡಿ ಪಿ ಐ ಸಂಘಟನೆಗಳ ಕಚೇರಿಗಳು, ಮುಖಂಡರ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಬೆಂಗಳೂರಿನ ಪಾದರಾಯನಪುರ ಬಳಿಯ ಟೆಲಿಕಾಂ ಲೇಔಟ್, ಫ್ರೇಜರ್ ಟೌನ್, ಸಂಪಿಗೆಹಳ್ಳಿ, ರಿಚ್ಮಂಡ್ ವೃತ್ತ, ಟ್ಯಾನರಿ ರಸ್ತೆಯಲ್ಲಿರುವ ಮುಖಂಡರ ಮನೆ ಮೇಲೆ ದಾಳಿ ನಡೆಸಿದೆ, ಫ್ರೇಜರ್ ಟೌನ್ ನಲ್ಲಿರುವ ಫಿಎಫ್ಐ ಸಂಘಟನೆಯ ಕಚೇರಿಗೆ ಬೀಗಹಾಕಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಗದು , ದಾಖಲೆ ವಶ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ ನಗದು, ಮೊಬೈಲ್, ಲ್ಯಾಪ್ ಟಾಪ್, ಪ್ರಚೋದಕ ಸಾಮಗ್ರಿ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ’ಕ್ಕೆ ‘ಸರ್ಪ ಸಂಸ್ಕಾರ ಸೇವೆ’ಗೆ ತೆರಳೋರಿಗೆ ಭಕ್ತರಿಗೆ ಬಿಗ್ ಶಾಕ್: ‘ದರ ಹೆಚ್ಚಳ’

‘ಬಿಎಂಎಸ್’ ಟ್ರಸ್ಟ್ ಖಾಸಗಿ ಪಾಲು : ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿ : ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

 

Share.
Exit mobile version