ವಿಜಯಪುರ: ಇಂದು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಅಲ್ಲದೇ ಇದರೊಟ್ಟಿಗೆ ಜೋರು ಶಬ್ದ ಕೂಡ ಕೇಳಿ ಬಂದಿದೆ. ಈ ಶಬ್ದಕ್ಕೆ ಬೆಚ್ಚಿ ಬಿದ್ದಂತ ಜನರು ಮನೆಯಿಂದ ಹೊರ ಓಡಿ ಬಂದು ಆತಂಕದಲ್ಲಿ ಕೆಲ ಕಾಲ ಕಳೆಯುವಂತೆ ಆಗಿದೆ ಎನ್ನಲಾಗುತ್ತಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಘೋಣಸಗಿ, ಕಳ್ಳಕವಟಗಿ, ಹುಬನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಅಲ್ಲದೇ ಗಡಿ ಭಾಗದ ಮೊರಬಗಿ, ತಿಕ್ಕುಂಡಿ, ಆಸಂಗಿಯಲ್ಲಿಯೂ ಭೂಮಿ ಕಂಪಿಸಿದೆ ಎಂಬುದಾಗಿ ಜನರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 11.29ರ ಸುಮಾರಿಗೆ ಜೋರು ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಅಡುಗೆ ಮನೆಯಲ್ಲಿನ ವಸ್ತುಗಳೆಲ್ಲ ಕೆಳಗೆ ಬಿದ್ದಿರುವುದಾಗಿ ಜನರು ಹೇಳಿದ್ದಾರೆ. ಜೋರು ಶಬ್ದ ಕೂಡ ಭೂ ಕಂಪನದ ಜೊತೆಗೆ ಬಂದ ಕಾರಣ, ಮನೆಯಿಂದ ಜನರು ಹೊರ ಓಡಿ ಬಂದು ಕೆಲ ಕಾಲ ಆತಂಕದಲ್ಲಿ ಬಯಲಿನಲ್ಲಿ ಕಾಲ ಕಳೆಯುವಂತೆ ಆಯ್ತು.
ಪಾಕಿಸ್ತಾನದ ‘ಲಾಹೋರ್’ ವಿಶ್ವದ ಅತ್ಯಂತ ಕಲುಷಿತ ನಗರವೆಂದು ಘೋಷಣೆ | Lahore City
ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು BJP-JDS ಷಡ್ಯಂತ್ರಕ್ಕೆ ಹೆದರಲ್ಲ: ಸಿಎಂ ಸಿದ್ಧರಾಮಯ್ಯ