ಬಾಗಲಕೋಟೆ: ಕೋಡಿಮಠ ಶ್ರೀಗಳ ಭವಿಷ್ಯ ನುಡಿಯಂತೆ, ಮತ್ತೊಂದು ಶಾಕಿಂಗ್ ಭವಿಷ್ಯವನ್ನು ಬೀಳಗಿಯ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗಿದೆ. ವಿಶ್ವದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಭೂಕಂಪನವಾಗಲಿದೆ. ಮುಂಬರುವಂತ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗವಿದೆ ಅಂತ ಶಾಕಿಂಗ್ ಭವಿಷ್ಯ ನುಡಿಯಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಯುಗಾದಿ ಪಾಡ್ಯದ ದಿನದ ವಿಶೇಷ ಭವಿಷ್ಯ ಇದಾಗಿದ್ದು, ನಿಜವಾಗುವುದೆಂದೇ ನಂಬಿದ್ದಾರೆ.
ಇಂದು ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ವಿಶೇಷ ಭವಿಷ್ಯವನ್ನು ನುಡಿಯಲಾಗಿದ್ದು, ವಿಶ್ವದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಭೂಕಂಪನಕ್ಕೆ ತತ್ತರಿಸಿ ಹೋಗಲಿದೆ ಎಂಬುದಾಗಿ ಹೇಳಲಾಗಿದೆ. ಅಲ್ಲದೇ ರಾಜಕೀಯ ವ್ಯಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಕಂಟಕ ಕಾದಿದೆ ಎಂಬುದಾಗಿ ಭವಿಷ್ಯ ನುಡಿಯಲಾಗಿದೆ.
ಅಂದಹಾಗೇ ಮಣ್ಣನಿಂದ ಒಂದು ಕಟ್ಟೆ ನಿರ್ಮಿಸಿ, ಅದಕ್ಕೆ ಜಕನೇರನಕಟ್ಟೆ ಎಂಬುದಾಗಿ ಜನರು ಬೀಳಗಿಯಲ್ಲಿ ಕರೆಯುತ್ತಾರೆ. ಈ ಕಟ್ಟೆಯ ಮೇಲೆ ಬಸವಣ್ಣನ ಮಣ್ಣಿನ ಮೂರ್ತಿ ಮಾಡಿ, ಬಿಂದಿಗೆ ನೀರು ಇರಿಸಿ ಪೂಜೆ ಮಾಡಿ, ತೆರಳುತ್ತಾರೆ. ರಾತ್ರಿ ಅಲ್ಲಿ ಯಾರೂ ಇರೋದಿಲ್ಲ. ಯಾವ ಭಾಗದಲ್ಲಿ ಬಿರುಕು ಬಿಟ್ಟಿರುತ್ತೋ ಆ ಭಾಗದಲ್ಲಿ ಭೂಕಂಪನ ಆಗಲಿದೆ ಎಂದು ನಂಬಲಾಗುತ್ತದೆ. ಅಲ್ಲದೇ ಕಟ್ಟೆಯ ಮೇಲಿರಿಸಿದ್ದಂತ ಆಹಾರದ ಉಂಡೆ ಖಾಲಿಯಾಗಿದ್ದರೇ ಆಹಾರ ಧಾನ್ಯ ಖಾಲಿಯಾಗಲಿದೆ. ಜನ ಪೀಡೆಯಿದೆ ಎಂಬಲಾಗುತ್ತದೆ.
ಇನ್ನೂ ಬಸವಣ್ಣನ ಮುಂದೆ ಇರಿಸಿದ್ದಂತ ಮಡಿಕೆ ನೀರು ಅರ್ಧ ಖಾಲಿಯಾಗಿದ್ದರೇ ಮಳೆ ಸಮೃದ್ಧಿಯಾಗಿ ಬರಲಿದೆ. ಜೊತೆಗೆ ಖರ್ಚು ಕೂಡ ಜಾಸ್ತಿಯಾಗಲಿದೆ ಎಂಬುದಾಗಿ ಅರ್ಥೈಸಲಾಗುತ್ತದೆ.
BREAKING: ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಪೋಟ: ಮೂವರು ಮಹಿಳೆಯರು ಸೇರಿ ನಾಲ್ವರಿಗೆ ಗಂಭೀರ ಗಾಯ
BREAKING: 10 & 12 ನೇ ತರಗತಿಯ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದ CBSE | New Syllabus For 10th, 12th