ಬೆಂಗಳೂರು : ಇಂದು ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಸೆಣಸಾಡಲಿವೆ.
ಬೆಂಗಳೂರಿನ ತಂಡ ಐಪಿಎಲ್ 18ನೇ ಸೀಸನ್ನ ಫೈನಲ್ ಆಡಲಿರುವ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರ್ ಸಿಬಿ ಟೀಂಗೆ ಶುಭ ಹಾರೈಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಅರ್ಸಿಬಿ ಜೆರ್ಸಿ ತೊಟ್ಟು ಟೀಂಗೆ ಶುಭ ಹಾರೈಸಿದ್ದು, ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ ಎಂದು ಶಿವಕುಮಾರ್ ಟೀಮಿಗೆ ಸಾಮಾಜಿಕ ಜಾಲತಾಣದ ಮೂಲಕ ಹಾರೈಸಿದ್ದಾರೆ.