ಬೆಂಗಳೂರು: ರಾಜ್ಯ ಸರ್ಕಾರದಿಂದ ಇ-ಆಸ್ತಿ ತಂತ್ರಾಂಶವನ್ನು ಆಸ್ತಿ ನೋಂದಣಿಗಾಗಿ ಜಾರಿಗೊಳಿಸಿದೆ. ಈಗ ಯಾವುದೇ ಆಸ್ತಿ ಖರೀದಿ, ಮಾರಾಟ ಮಾಡಲು ಇ-ಆಸ್ತಿ ಪ್ರಮಾಣಪತ್ರ ಕಡ್ಡಾಯವಾಗಿದೆ. ಇಂತಹ ಇ-ಆಸ್ತಿ ಪ್ರಮಾಣ ಪತ್ರ ಸಿಗದೇ ರಾಜ್ಯಾಧ್ಯಂತ ಆಸ್ತಿ ಮಾಲೀಕರು, ಖರೀದಿದಾರರು ಸಮಸ್ಯೆಗೆ ಸಿಲುಕಿದ್ದಾರೆ. ಇ-ಆಸ್ತಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ್ದರಿಂದಾಗಿ ಸಾರ್ವಜನಿಕರು ಸಮಸ್ಯೆಗೆ ಸಿಲುಕುವಂತಾಗಿದ್ದು, ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
*ನನ್ನ ಅಪ್ಪನ ಆಪರೇಶನ್ ಇದ್ದು ಹಣದ ಅವಶ್ಯಕತೆ ಇರುವ ಕಾರಣ ನಾನು ನನ್ನ ಅಪ್ಪನ ಸೈಟ್ ಮಾರಲು ಮುಂದಾಗಿದ್ದೇನೆ ಆದರೆ ಇ-ಆಸ್ತಿ ಪ್ರಮಾಣಪತ್ರದಿಂದ ಎಲ್ಲವೂ ನಿಧಾನವಾಗುತ್ತಿದೆ. ಸಿಎಂ ಸಾಹೇಬ್ರೇ ನಿಮ್ಮ ಗ್ಯಾರಂಟಿ ಇದರ ಮೇಲೆ ಕೂಡ ಇರಲಿ.
* ವೇದಾ, ತುಮಕೂರು
ನನ್ನ ಅಕ್ಕನ ಮದುವೆಗೆ ಹಣದ ಅವಶ್ಯಕತೆ ಇದ್ದು, ನನ್ನ ಅಪ್ಪನ ಆಸ್ತಿಯನ್ನು ತುರ್ತಾಗಿ ಮಾರಾಟ ಮಾಡಬೇಕಾಗಿದೆ. ಇ-ಆಸ್ತಿ ಪ್ರಮಾಣಪತ್ರ ದಿಂದಾಗಿ ನನಗೆ ನನ್ನ ಅಕ್ಕನ ಮದುವೆ ಬಗ್ಗೆ ಭಯ ಉಂಟಾಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಮೊದಲಿನ ಹಾಗೇ ಮಾಡಿದ್ದರೆ ಚೆನ್ನಾ….!
ಚಿನ್ಮಯಿ, ತುಮಕೂರು
ಜನತೆ ಜೊತೆಗೆ ರಾಜ್ಯ ಸರ್ಕಾರ ಚೆಲ್ಲಾಟ: ಇ-ಆಸ್ತಿ ಪ್ರಮಾಣಪತ್ರ ದಿಂದಾಗಿ ರಾಜ್ಯದ ಜನತೆಗೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತ ಇರುವುದು ಸುಳ್ಳಲ್ಲ. ಸುಳ್ಳು ಹೇಳಿಕೊಂಡು ಆಸ್ತಿಯನ್ನು ಪರಬಾರೆ ಮಾಡುವವರ ವಿರುದ್ದ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಬೇಕೆ ಹೊರತು, ಸಾಮಾನ್ಯ ಜನರ ಮೇಲೆ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.
ಈ ನಡುವೆ ಇ-ಆಸ್ತಿ ಪ್ರಮಾಣಪತ್ರ ಪಡೆದುಕೊಳ್ಳವುದುಕ್ಕೆ ತೀವ್ರ ಪ್ರಮಾಣದಲ್ಲಿ ಹಲವು ಮಂದಿ ಸಮಸ್ಯೆಯನ್ನು ಎದುರಿಸುತ್ತಾ ಇರುವುದು ಸುಳ್ಳಲ್ಲ. ಕಂದಾಯ ಇಲಾಖೆಯಲ್ಲಿರುವ ಲೋಪಗಳನ್ನು,. ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಚಿವರ ಕ್ರಮವನ್ನು ಮೆಚ್ಚಿಕೊಳ್ಳಬೇಕು ಆದರೆ ಹೀಗೆ ಸಚಿವರ ನಡೆ ಸಮಂಜಸನಾ? ಎನ್ನುವುದು ರಾಜ್ಯದ ಜನತೆಗೆ ಪ್ರಶ್ನೆಯಾಗಿದೆ. ಸಚಿವರು ಇನ್ನೂ ಕೆಲವು ದಿನಗಳ ಕಾಲ ಇ-ಆಸ್ತಿ ಪ್ರಮಾಣಪತ್ರಕ್ಕೆ ಬ್ರೇಕ್ ಹಾಕಬೇಕಿದರೆ ಹಲವು ಮಂದಿ ನಿಟ್ಟಿಸಿರುವ ಬಿಡುತ್ತಾರೆ.
ಕರ್ನಾಟಕದಲ್ಲಿ ಕಂದಾಯ ಇಲಾಖೆಯಿಂದ ಆಸ್ತಿ ದಾಖಲೆಗಳ ನಕಲುತನ ತಡೆಯಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇ-ಆಸ್ತಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ವ್ಯಾಪ್ತಿಯಲ್ಲಿ ಇ-ಖಾತಾ ಹಾಗೂ ಗ್ರಾಮೀಣ ಮಟ್ಟದಲ್ಲಿನ ಆಸ್ತಿ ನೋಂದಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಲಾಗಿದೆ. ಆದರೇ ನಗರ ಪ್ರದೇಶದಲ್ಲಿ ಜಾರಿಗೊಳಿಸಿರುವಂತ ಇ-ಆಸ್ತಿ ತಂತ್ರಾಂಶದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
ಇ-ಆಸ್ತಿ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯದಿಂದ ಸಾರ್ವಜನಿಕರಿಗೆ ಸಮಸ್ಯೆ: ಇ-ಆಸ್ತಿ ತಂತ್ರಾಂಶದ ಮೂಲಕವೇ ಆಸ್ತಿ ನೋಂದಣಿ, ಮಾರಾಟವನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಲಾಗಿದೆ. ಈ ಪ್ರಮಾಣ ಪತ್ರವಿಲ್ಲದೇ ಆಸ್ತಿ ಖರೀದಿಯಾಗಲೀ, ಮಾರಾಟವಾಗಲೀ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ. ಮದುವೆ, ಅನಾರೋಗ್ಯದ ಸಮಸ್ಯೆ, ಇತರೆ ಕಾರಣಗಳಿಂದಾಗಿ ತುರ್ತು ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಇ-ಆಸ್ತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದ್ದರಿಂದ ಮಾರಾಟ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.
ಪ್ರಮಾಣಪತ್ರ ತ್ವರಿತವಾಗಿ ಸಿಗುವಂತೆ ಮಾಡಿ: ತುರ್ತು ಸಂದರ್ಭಗಳಲ್ಲಿ, ಹಣಕಾಸಿನ ಅಗತ್ಯವಿರೋರು ತಮ್ಮ ಬಳಿ ಆಪಾತ್ಕಾಲದಲ್ಲಿ ನೆರವಾಗಲೆಂದು ಇಟ್ಟುಕೊಂಡಿರೋ ಆಸ್ತಿ ಮಾರಾಟಕ್ಕೆ, ಇ-ಆಸ್ತಿ ಪ್ರಮಾಣ ಪತ್ರ ಕಡ್ಡಾಯವಾಗಿರುವುದರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಇ-ಆಸ್ತಿ ಪ್ರಮಾಣಪತ್ರ ಸಿಗದೇ ಸಾರ್ವಜನಿಕರು ಪರದಾಡುವಂತೆ ಆಗಿದೆ. ಹೀಗಾಗಿ ರಾಜ್ಯ ಸರ್ಕಾರವು ಇ-ಆಸ್ತಿ ಪ್ರಮಾಣಪತ್ರವನ್ನು ತ್ವರಿತವಾಗಿ ಆಸ್ತಿ ಮಾರಾಟಗಾರರಿಗೆ, ಖರೀದಿದಾರರಿಗೆ ಸಿಗುವಂತೆ ಮಾಡುವಂತೆ ಆಗ್ರಹಿಸಿದ್ದಾರೆ