ಬೆಂಗಳೂರು:ಡಿವೈಎಸ್ಪಿ ಶಾಂತಕುಮಾರ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಏಫ್ಐಆರ್ ದಾಖಲಾಗಿದೆ.ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಆರೋಪ ಸಂಬಂಧ ಡಿವೈಎಸ್ಪಿ ಶಾಂತಕುಮಾರ್, ಪತ್ನಿ ಲಕ್ಷ್ಮಿಕಾಂತ, ಮಕ್ಕಳಾದ ಮಹೇಶ್ ಹಾಗೂ ಸಾಯಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ವಿದ್ಯಾ ಅವರು ಜನವರಿ 7 ರಂದು ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆವರಣದಲ್ಲಿ ತೆಂಗಿನ ಕಾಯಿ, ನಿಂಬೆ ಹಣ್ಣು, ಬೂದು ಕುಂಬಳಕಾಯಿ ಒಡೆದು ಹಾಕಲಾಗಿತ್ತು.
ಈ ಬಗ್ಗೆ ಕಸ ಗುಡಿಸುವವರ ಬಳಿ ಕ್ಲೀನ್ ಮಾಡುವಂತೆ ವಿದ್ಯಾರವರು ಹೇಳಿದ್ದಾರೆ.ಆದರೆ ಡಿವೈಎಸ್ ಪಿ ಲಕ್ಷ್ಮಿಕಾಂತ ಅವರು ಸುಮ್ಮನೆ ಜಗಳ ತೆಗೆದಿದ್ದಾರೆ. ಈ ವೇಳೆ ಪತ್ನಿಯ (ಲಕ್ಷ್ಮಿ ಕಾಂತ) ಸಹಾಯಕ್ಕೆ ಶಾಂತಕುಮಾರ್ ಹಾಗೂ ಮಕ್ಕಳು ಸೇರಿ ಜಗಳವಾಡಿದ್ದಾರೆ. ಬಳಿಕ ವಿದ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಲಾಗಿದೆ.ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಆರೋಪ ಸಂಬಂಧ ಡಿವೈಎಸ್ಪಿ ಶಾಂತಕುಮಾರ್, ಪತ್ನಿ ಲಕ್ಷ್ಮಿಕಾಂತ, ಮಕ್ಕಳಾದ ಮಹೇಶ್ ಹಾಗೂ ಸಾಯಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.