ಬೆಂಗಳೂರು: ಕಲಾವಿದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂಬುದಾಗಿ ಹೇಳಿರುವಂತ ಹೇಳಿಕೆ ಸರಿಯಾದುದಲ್ಲ ಅಂತ ನಟಿ ರಮ್ಯಾ ಆಕ್ಷೇಪಿಸಿದ್ದಾರೆ.
ನಗರದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಟ್ಟು, ಬೋಲ್ಟ್ ಹೇಳಿಕೆ ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟ ಪಡಿಸಿದ್ದಾರೆ. ಆದರೇ ಹಾಗೆ ಅವರು ಹೇಳಿದ್ದು ತಪ್ಪು. ಅವರ ಈ ರೀತಿಯ ಹೇಳಿಕೆ ಕೆಲವರಿಗೆ ಇಷ್ಟ ಆಗಿಲ್ಲ. ಈಗಾಗಲೇ ಡಿಕೆ ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಾವು ಬಿಟ್ಟು ಬಿಡೋಣ ಅಂತ ತಿಳಿಸಿದರು.
ನನಗೆ ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ ಒಂದು ವಾರದ ಹಿಂದೆಯೇ ಆಹ್ವಾನ ಬಂದಿತ್ತು. ಬೇರೆಯವರಿಗೆ ಆಹ್ವಾನ ಹೋಗಿದ್ಯೋ ಇಲ್ಲವೋ ನನಗೆ ಗೊತ್ತಿಲ್ಲ. ನನಗಂತೂ ಆಹ್ವಾನ ಬಂದಿದೆ. ಹಾಗಾಗಿ ನಾನು ಈಗ ಫಿಲ್ಮ್ ಫೆಸ್ಟಿವೆಲ್ ಗೆ ಹೋಗ್ತಿದ್ದೇನೆ. ಒಂದು ಮಾತು ತಿಳಿದುಕೊಳ್ಳಬೇಕಿದೆ. ನಾಡು, ನುಡಿ, ಜಲದ ವಿಚಾರವಾಗಿ ಯಾವುದೇ ಆಹ್ವಾನ ಬೇಕಿಲ್ಲ. ಎಲ್ಲರೂ ಅವರಾಗಿಯೇ ಬರಬೇಕು ಎಂದರು.
ಮಾ.9ರಂದು ಕೊಪ್ಪಳದಲ್ಲಿ ‘KUWJ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭ: ‘ಪತ್ರಕರ್ತ’ರದ್ದೇ ಕಾರುಬಾರು
‘EPFO ಖಾತೆದಾರ’ರಿಗೆ ಮಹತ್ವದ ಮಾಹಿತಿ: ಈ ಬದಲಾವಣೆಗಳಿಗೆ ‘ಕಂಪನಿ ಅನುಮತಿ’ ಅಗತ್ಯವಿಲ್ಲ