ವಿಜಯನಗರ: ಇಂದು ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕಟ್ ಆಗಿರುವಂತ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳದಲ್ಲಿದ್ದಂತ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸದ್ಯ ಆಗಸ್ಟ್.13ರಂದು ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸುವಂತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದರಿಂದ ಈವರೆಗೆ 8 ಟಿಎಂಸಿ ನೀರು ಪೋಲಾಗಿದೆ. ಇದೇ ಡ್ಯಾಂ ನೀರು ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಜೀವನಧಾರೆಯಾಗಿದೆ ಎಂದರು.
ನಿನ್ನೆ ರಾತ್ರಿಯಿಂದ 10 ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರಗಡೆ ಬಿಡಲಾಗುತ್ತಿದೆ. 19ನೇ ಗೇಟ್ ಚೈನ್ ತುಂಡಾಗಿ ಮುರಿದಿದೆ. ಇದರ ಮೇಲೆ ಹೆಚ್ಚು ಒತ್ತಡ ಬೀಳಬಾರದು ಎನ್ನುವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುರಕ್ಷತೆಯ ದೃಷ್ಟಿಯಿಂದ ನದಿಗೆ 98 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಪ್ರಸ್ತುತ 28,056 ಕ್ಯೂಸೆಕ್ಸ್ ಒಳಹರಿವಿದೆ. ಮುರಿದು ಬಿದ್ದಿರುವ ಗೇಡ್ ದುರಸ್ತಿ ಮಾಡಲು ನೀರಿನ ಪ್ರಮಾಣ ಇಳಿಕೆ ಮಾಡಲಾಗುತ್ತಿದೆ. 19ನೇ ಗೇಟ್ ಮೇಲೆ ಒತ್ತಡ ಕಡಿಮೆ ಮಾಡಲು ನೀರು ರಿಲೀಸ್ ಮಾಡಲಾಗಿದೆ. ಉಳಿದ ಗೇಟ್ ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಸುರಕ್ಷಿತವಾಗಿರುವಂತೆ ಸೂಚಿಸಿದರು.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ