Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾವೇರಿ ನದಿ ಮಲೀನತೆ, ನದಿ ಪಾತ್ರ ಒತ್ತುವರಿ ತಡೆಯಲು ತಂಡ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್
KARNATAKA

ಕಾವೇರಿ ನದಿ ಮಲೀನತೆ, ನದಿ ಪಾತ್ರ ಒತ್ತುವರಿ ತಡೆಯಲು ತಂಡ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ

ಕೊಡಗು : “ಕಾವೇರಿ ನದಿ ಮಲೀನತೆ ಹಾಗೂ ನದಿ ಪಾತ್ರಗಳ ಒತ್ತುವರಿ ತಡೆಯಲು ತಂಡ ರಚನೆಗೆ ಕ್ರಮವಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೊಡಗಿನ ಭಾಗಮಂಡಲ ಹೆಲಿಪ್ಯಾಡ್ ನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಕಾವೇರಿ ನದಿ ಮಲೀನತೆ ಹಾಗೂ ಒತ್ತುವರಿ ಬಗ್ಗೆ ಕೇಳಿದಾಗ, “ಈ ನೆಲ,‌ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ನಿಮ್ಮ (ಮಾಧ್ಯಮಗಳ) ಸಲಹೆ ಇದ್ದರೂ ಸ್ವೀಕರಿಸುತ್ತೇವೆ” ಎಂದು ಉತ್ತರಿಸಿದರು.

ನೀರಿನ ಸದ್ಬಳಕೆ ಕುರಿತು ಅರಿವು; ಒಂದು ವಾರಗಳ ಕಾಲ ಅಭಿಯಾನ

“ವಿಶ್ವ ಜಲದಿನದ ಅಂಗವಾಗಿ ಒಂದು ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ” ಎಂದು ತಿಳಿಸಿದರು.

“ಕಳೆದ ವರ್ಷ ಉತ್ತಮ ಮಳೆಯಾದಂತೆ ಈ ವರ್ಷವೂ ಉತ್ತಮವಾಗಿ ಮಳೆಯಾಗಿ ಜನರ ಬದುಕು ಹಸನಾಗಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ” ಎಂದರು.

ಕಾವೇರಿ ಆರತಿಗೆ ಹಣ ಮೀಸಲು

“ನದಿ ತೀರದಲ್ಲಿ ಕಾವೇರಿ ಆರತಿ ಆಯೋಜಿಸಲು ಈಗಾಗಲೇ ಹಣ ಮೀಸಲಿಡಲಾಗಿದೆ. ಎಷ್ಟು ದಿನಗಳಿಗೆ ಒಮ್ಮೆ ಆರತಿ ಮಾಡಬೇಕು ಎನ್ನುವ ತೀರ್ಮಾನವನ್ನು ಮುಂದೆ ತಿಳಿಸಲಾಗುವುದು. ಆರತಿ ವೇಳೆ ಕೊಡಗಿನ ಕಲಾವಿದರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಜರಾಯಿ, ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ” ಎಂದರು.

“ನೀರನ್ನು ದುರ್ಬಳಕೆ ಮಾಡುವುದಿಲ್ಲ, ಸುಖಾಸುಮ್ಮನೆ ಖರ್ಚು ಮಾಡುವುದಿಲ್ಲ ಎಂದು ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ಪ್ರತಿಜ್ಞಾವಿಧಿ ಭೋದಿಸಲಾಗುವುದು. ಇದಕ್ಕೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ಜನರು ಆನ್ ಲೈನ್ ಮೂಲಕವೂ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು. ಎಲ್ಲಾ ಸಾರ್ವಜನಿಕರು, ರಾಜಕಾರಣಿಗಳು ಇದರಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.

“ಈ ಹಿಂದೆ ತಲಕಾವೇರಿಗೆ ಬಂದು ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರು, ನಾನು ಹಾಗೂ ಪಕ್ಷದ ಅನೇಕ ನಾಯಕರ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಲಾಯಿತು. ಬೆಂಗಳೂರಿಗೆ ಕಾವೇರಿ ಕುಡಿಯುವ ನೀರಿನ 5 ನೇ ಹಂತವೂ ಈಗ ಕಾರ್ಯರೂಪಕ್ಕೆ ಬಂದಿದೆ. ಇದೆಲ್ಲವೂ ಸಾಧ್ಯವಾಗಿರುವುದು ಕಾವೇರಿ ನದಿಯಿಂದ. ಕೆಆರ್ ಎಸ್ ಬಾಗಿನ ಸಮರ್ಪಣೆ ವೇಳೆ ಕಾವೇರಿ ಆರತಿ ಮಾಡುವುದಾಗಿ ನಾನು ಮಾತು ಕೊಟ್ಟಿದ್ದೆ ಅದಕ್ಕೂ ಸಿದ್ದತೆಗಳು ನಡೆಯುತ್ತಿದೆ” ಎಂದರು.

“ಆಡಳಿತ ಪಕ್ಷಕ್ಕೆ ಇಬ್ಬರು ಶಾಸಕರನ್ನು ಕೊಟ್ಟಿರುವ ಕೊಡಗಿನ ಮಹಾಜನತೆಗೆ ಸಾಷ್ಟಾಂಗ ನಮಸ್ಕಾರಗಳು. ಕೊಡಗಿನಿಂದ ಹರಿಯುವ ಕಾವೇರಿ ನೀರು ಬೆಂಗಳೂರಿನ ಜನರ ಬದುಕಿನಲ್ಲಿ ಸಂತೋಷ ಉಂಟು ಮಾಡಿದೆ.‌ ಕೊಡಗು ಇಡೀ ರಾಜ್ಯಕ್ಕೆ, ತಮಿಳುನಾಡಿಗೆ ಆಶ್ರಯ. ದಕ್ಷಿಣ ಭಾರತದ ಜೀವನದಿ.‌ ಆದ ಕಾರಣ ಮೊದಲ ಪೂಜೆ ತಲಕಾವೇರಿಯಲ್ಲಿ ಸಲ್ಲಬೇಕು. ಆದ್ದರಿಂದ ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ಕಾವೇರಿ ಆರತಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.

ನಾಳೆ ತಮಿಳುನಾಡಿಗೆ ಪ್ರಯಾಣ

“ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ನಾಳೆ (ಶನಿವಾರ) ಕರೆದಿರುವ ಸಭೆಯಲ್ಲಿ ನಾನು ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಭಾಗವಹಿಸುತ್ತಿದ್ದೇವೆ” ಎಂದು ತಿಳಿಸಿದರು.

ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಮಾಡಿದ್ದುಣ್ಣೋ ಮಾರಾಯ- ಡಿಕೆಶಿ

BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace

Share. Facebook Twitter LinkedIn WhatsApp Email

Related Posts

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

2 Mins Read

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

1 Min Read

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

2 Mins Read
Recent News

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

​ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಇರಾಕ್ ಮೂಲಕ ಸಾಗಲಿದೆ ಇತಿಹಾಸದ ಅತಿ ದೊಡ್ಡ ಶೋಕಯಾತ್ರೆ!

State News
KARNATAKA

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದ ಹಿರಿಯ ಮುಖಂಡರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದಕ್ಷ ಕಾರ್ಯವೈಖರಿ ಮತ್ತು ಜನಸ್ನೇಹಿ…

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

ಶೀಘ್ರವೇ ರಾಜ್ಯದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ KUWJ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.