ಬೆಂಗಳೂರು : ತಾವು ಕುಟುಂಬ ಸದಸ್ಯರ ಜತೆ ಕೈಗೊಳ್ಳುತ್ತಿರುವ ಒಂದು ವಾರದ ಅಮೆರಿಕ ಪ್ರವಾಸ ಖಾಸಗಿಯದ್ದಾಗಿದ್ದು, ತಾವು ಯಾವುದೇ ನಾಯಕರನ್ನು ಭೇಟಿ ಮಾಡುತ್ತಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಡಿಸಿಎಂ ಅವರು ಇಂದಿನಿಂದ ಸೆ. 15 ರವರೆಗೆ ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸ ಸಂದರ್ಭದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಹಿನ್ನೆಲೆಯಲ್ಲಿ ಡಿಸಿಎಂ ಅವರು ಮಾಧ್ಯಮ ಹೇಳಿಕೆ ಮೂಲಕ ಈ ಸ್ಪಷ್ಟನೆ ನೀಡಿದ್ದಾರೆ.
ಅವರು ಅಮೆರಿಕ ಪ್ರವಾಸ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರವನ್ನು ಸಹ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
BREAKING: ತುಮಕೂರಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಮೂವರು ದುರ್ಮರಣ | Tumkur Accident
‘CM ಸ್ಥಾನ’ಕ್ಕೆ ಸೂಟ್ ಹೊಲಿಸಿಕೊಳ್ಳೋರ ಸಂಖ್ಯೆ ಹೆಚ್ಚಾಗಿದೆ: ‘ಕಾಂಗ್ರೆಸ್’ಗೆ BJP ಟಾಂಗ್