ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಹೀಗಿದ್ದರೂ ಬೆಂಗಳೂರಲ್ಲಿ ಡಿಪೋ ಮ್ಯಾನೇರಜ್ ಒಬ್ಬ ಚಾಲಕರು ಕುಡಿದು ಬಂದರೂ ಲಂಚ ಪಡೆದು ಡ್ಯೂಟಿ ನೀಡಿದಂತ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬಿಎಂಟಿಸಿ ಡಿಪೋ ಮ್ಯಾನೇಜರ್ ಸಹಿತ 9 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಹೌದು. ಕುಡಿದು ಬರುತ್ತಿದ್ದಂತ ಎಲೆಕ್ಟ್ರಿಕ್ ಬಸ್ ಡ್ರೈವರ್ ಗಳ ಬಳಿಯಲ್ಲಿ ಲಂಚ ಪಡೆದು ಡ್ಯೂಟಿ ನೀಡಿದ್ದ ಕಾರಣದಿಂದಾಗಿ ಬಿಎಂಟಿಸಿ ಘಟಕ ವ್ಯವಸ್ಥಾಪಕ ಎಂ.ಜಿ ಕೃಷ್ಣ, ಸಹಾಯಕ ಲೆಕ್ಕಿಗ ಅರುಣ್ ಕುಮಾರ್ ಇ.ಎಸ್, ಕಿರಿಯ ಸಹಾಯಕಿ ಪ್ರತಿಭಾ.ಕೆಎಸ್, ಕರ್ನಾಟಕ ರಾಜ್ಯ ಸಾರಿಗೆ ಹವಾಲ್ದಾರ್ ಮಂಜುನಾಥ.ಎಂ, ಪೇದೆ ಮಂಜುನಾಥ ಎಸ್.ಜಿ, ಚೇತನ್ ಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ.ಕೆ ಸೇರಿದಂತೆ 9 ಮಂದಿಯನ್ನು ಅಮಾನತುಗೊಳಿಸಲಾಗಿದೆ.
ಅಂದಹಾಗೇ ಬಿಎಂಟಿಸಿ ಚಾಲಕರು ಕುಡಿದು ಡ್ರೈವಿಂಗ್ ಮಾಡುತ್ತಿರುವಂತ ವೀಡಿಯೋ ವೈರಲ್ ಆಗಿತ್ತು. ಇಂತವರಿಗೆ ಲಂಚ ಪಡೆದು ಅಧಿಕಾರಿಗಳು ಡ್ಯೂಟಿ ನೀಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಡಿಪೋ ಮ್ಯಾನೇಜರ್, ಚಾಲಕರು ಸೇರಿದಂತೆ 9 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








