ಮಂಡ್ಯ: ಮದ್ದೂರಲ್ಲಿ ಮತ್ತೆ ಕೆಲ ಕಾಲ ಗಣೇಶ ಮೆರವಣಿಗೆ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಮ್ ರಹೀಮ್ ನಗರದಲ್ಲಿ ಮಸೀದಿ ಬಳಿಯಲ್ಲಿ ಈ ಘಟನೆ ನಡೆದಿದೆ.
ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಕೂರಿಸಿದ್ದಂತ ಗಣೇಶ ಮೆರವಣಿಗೆ ವೇಳೆಯಲ್ಲಿ ಗೊಂದಲ ಸೃಷ್ಠಿಯಾಗಿ ಕೆಲ ಕಾಲ ಆತಂಕಕ್ಕೂ ಕಾರಣವಾಗಿತ್ತು. ಈ ವೇಳೆ ಗಣೇಶ ಮೆರವಣಿಗೆಯನ್ನು ಪೊಲೀಸರು ತಡೆದಂತ ಘಟನೆ ನಡೆದಿದೆ.
ಮದ್ದೂರಲ್ಲಿ ಗಣೇಶ ಮೆರವಣಿಗೆಯನ್ನು ಪೊಲೀಸರು ತಡೆದಂತ ವೇಳೆಯಲ್ಲಿ ಕೆಲ ಕಾಲ ವಾಗ್ವಾದ ನಡೆದಿದೆ. ಮಸೀದಿ ಮುಂದಿ ಮೆರವಣಿಗೆ ಹೋಗಲು ನಿಮಗೆ ಅನುಮತಿ ನೀಡಲ್ಲ. ಮತ್ತೊಂದು ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗುವಂತೆ ಸೂಚಿಸಿದರು. ಈ ವೇಳೆ ನಾವು ಇದೇ ರಸ್ತೆಯಲ್ಲಿ ಹೋಗಬೇಕೆಂದು ಪಟ್ಟನ್ನು ಯುವಕರು ಹಿಡಿದರು. ಕೆಲ ಕಾಲ ಪೊಲೀಸರ ಜೊತೆಗೆ ಯುವಕರು ಮಾತಿನ ಚಕಮಕಿಯನ್ನು ನಡೆಸಿದರು. ಕೊನೆಗೆ ಯವಕನ್ನು ಮನವೊಲಿಸಲು ಯಶಸ್ವಿಯಾದಂತ ಪೊಲೀಸರು, ಮಸೀದಿ ದಾರಿ ಬಿಟ್ಟು ಬೇರೆಡೆಯಿಂದ ಗಣೇಶ ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟರು.
ಸಾಗರ ತಾಲ್ಲೂಕಲ್ಲಿ ರೈತರ ಮೇಲೆ ‘ಅರಣ್ಯಾಧಿಕಾರಿ’ಗಳ ಕಿರುಕುಳ ಹೆಚ್ಚುತ್ತಿದೆ: ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿ
ಬಳ್ಳಾರಿ: ಸೆ.14ರ ನಾಳೆ ಜಿಲ್ಲೆಯ ಈ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ | Power Cut