ಬೆಂಗಳೂರು: ಅಭಿಮಾನ್ ಸ್ಟುಡಿಯೋ ಷರತ್ತು ಉಲ್ಲಂಘನೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಭಿಮಾನ್ ಸ್ಟುಡಿಯೋಗೆ ಕೆಂಗೇರಿ ಹೋಬಳಿ ಸರ್ವೆ ನಂ.26ರಲ್ಲಿ 20 ಎಕರೆ ಜಮೀನು ಮಾರಾಟವಾಗಿದೆ. 1970ರಲ್ಲಿ 6 ಸಾವಿರಕ್ಕೆ 20 ಎಕರೆ ಜಮೀನು ಮಾರಾಟ ಆಗಿದೆ. ಕೆಲವು ಷರತ್ತುಗಳನ್ನ ಹಾಕಿ ಜಮೀನು ನೀಡಲಾಗಿದೆ ಎಂದರು.
ಅಭಿಮಾನ್ ಸ್ಟುಡಿಯೋ ಕೆಲಸಕ್ಕಾಗಿ ಬಳಕೆ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆರ್ಥಿಕ ಸಮಸ್ಯೆ ಕಾರಣ ನೀಡಿ ಮಾರಾಟಕ್ಕೆ ಅವಕಾಶ ಕೇಳಿದ್ದರು. 10 ಎಕರೆ ಜಮೀನು ಮಾರಾಟಕ್ಕೆ ಅವಕಾಶ ಕೇಳಿದ್ದರು. ಆದರೇ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ. 14.37 ಕೋಟಿಗೆ 1 ಎಕರೆ ಜಮೀನು ಮಾರಾಟಕ್ಕೆ ಮುಂದಾಗಿದ್ದಾರೆ. ಷರತ್ತು ಉಲ್ಲಂಘನೆ ಆಗಿದ್ದರಿಂದ ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೋರ್ಟ್ ನಲ್ಲಿ ಕೂಡ ಅಭಿಮಾನ್ ಸ್ಟುಡಿಯೋ ಜಾಗದ ವಿಚಾರವಿದೆ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರು ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದ್ದಾರೆ. ಈ ವಿಚಾರವನ್ನು ಸಿಎಂ ಸಿದ್ಧರಾಮಯ್ಯ ಬಳಿ ಚರ್ಚೆ ಮಾಡುತ್ತೇನೆ ಎಂಬುದಾಗಿ ತಿಳಿಸಿದರು.
ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಸಿಎಂ ಸಿದ್ಧರಾಮಯ್ಯ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ