ಬೆಂಗಳೂರು: ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ನಡಿದದ್ದಂತ ಬಹುಕೋಟಿ ಟೆಂಡರ್ ಅಕ್ರಮ ಸಂಬಂಧ ಡಿಎಸ್ಇಆರ್ ಟಿ ನಿರ್ದೇಶಕಿಯಾಗಿದ್ದಂತ ವಿ.ಸುಮಂಗಲಾ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಶಿಕ್ಷಕರ ತರಬೇತಿ ಸಂಸ್ಥೆಗಳು ಹಾಗೂ ವಿವಿಧ ಕಚೇರಿಗಳಲ್ಲಿ ಅನುಪಯುಕ್ತವಾಗಿರುವ ಇ-ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇ ಮಾಡುವ ಟೆಂಡರ್ ನ ಸಂಬಂಧ ಕಾರ್ಯಾದೇಶ ನೀಡಿರುವ M/s E-Pragathi Recycling Pvt Ltd ಸಂಸ್ಥೆಗೆ ತಾಂತ್ರಿಕ ಬಿಡ್ ನಲ್ಲಿ ಅರ್ಹತೆ ಇಲ್ಲದೇ ಇದ್ದರೂ LL ಎಂದು ಪರಿಗಣಿಸಿ ಕಾರ್ಯಾದೇಶ ನೀಡಲಾಗಿದೆ ಎಂದಿದ್ದಾರೆ.
ಅನ್ನು ಈ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಟೆಂಡರ್ ನಲ್ಲಿ Recycling Capacityಯನ್ನು 14000 MTvನಿಂದ 1206.5 MTvಗೆ ತಿದ್ದುಪಡಿ ಮಾಡಲಾಗಿದೆ. ಸದರಿ ಸಂಸ್ಥೆಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಪ್ರಮಾಣಪತ್ರವನ್ನು ಹೊಂದಿಲ್ಲದೇ ಇರುವುದಾಗಿ ಹಾಗೂ ಹಿಂದಿನ ಟೆಂಡರ್ ನಲ್ಲಿ H1 ದರ ರೂ.9.87 ಕೋಟಿಗಳಾಗಿದ್ದೂ, ಸದರಿ ಟೆಂಡರ್ ಅನ್ನು ಏಕಾಏಕಿ ರದ್ದುಪಡಿಸಿ, ಪ್ರಸ್ತುತ ಟೆಂಡರ್ ನಲ್ಲಿ H1 ದರ 8.24 ಕೋಟಿಗಳಾಗಿದ್ದು ರೂ.1.62 ಕೋಟಿಗಳು ನಷ್ಟವಾಗಿರುವುದು. ಟೆಂಡರ್ ನಿಯಮಗಳಲ್ಲಿ ಉಲ್ಲಂಘಿಸಿ ಬೆಂಗಳೂರಿನ ಸಂಸ್ಥೆಗೆ ಕಾರ್ಯಾದೇಶ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ಸಂಬಂಧ ಕೂಡಲೇ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಇಲಾಖಾ ಸಚಿವರು ಸೂಚಿಸಿರುತ್ತಾರೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವಂತ ವರದಿಯಲ್ಲಿ ಇ-ಟೆಂಡರ್ ನಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ವಿ. ಸುಮಂಗಲ, ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಇಲಾಖೆ, (ಡಿ.ಎಸ್. ಇ.ಆರ್.ಟಿ)., ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ-10(1) (ಡಿ) ರನ್ವಯ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಸದರಿ ಅಧಿಕಾರಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958ರ ನಿಯಮ-98 ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಅಂತ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
7ನೇ ವೇತನ ಆಯೋಗ ಜಾರಿ ಹಿನ್ನಲೆ: ಜು.29ರಿಂದ ನಡೆಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಮುಂದೂಡಿಕೆ
‘ಆರೋಗ್ಯ ಇಲಾಖೆ’ಯ ‘NHM ಗುತ್ತಿಗೆ ನೌಕರ’ರ ಖಾಯಂ ಯಾವಾಗ?: ‘ಸಿಎಂ ಸಿದ್ಧರಾಮಯ್ಯ’ಗೆ ನೌಕರರ ಪ್ರಶ್ನೆ