ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಏಪ್ರಿಲ್ 5 ರವರೆಗೆ ಬಿಸಿಗಾಳಿ ಬೀಸಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಐಎಂಡಿ ಪ್ರಕಾರ, ದಕ್ಷಿಣ ತಮಿಳುನಾಡಿನಿಂದ ಪೂರ್ವ ವಿದರ್ಭದವರೆಗೆ ಏಪ್ರಿಲ್ 5 ರಿಂದ 8 ರವರೆಗೆ ಮಧ್ಯ ಮಹಾರಾಷ್ಟ್ರದಲ್ಲಿ ಮತ್ತು ಕೊಂಕಣ ಮತ್ತು ಗೋವಾ, ಮರಾಠವಾಡ, ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಏಪ್ರಿಲ್ 6 ರಿಂದ 8 ರವರೆಗೆ ಪ್ರತ್ಯೇಕ ಲಘು ಮಳೆಯಾಗುವ ಸಾಧ್ಯತೆಯಿದೆ ಅಂತ ಹೇಳಿದೆ.