ಬೆಂಗಳೂರು: ನಗರದಲ್ಲಿ ಬೆಂಗಳೂರು ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಡ್ರಗ್ ಪೆಡ್ಲರ್ ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಆರೋಪಿಯಿಂದ 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರಿಂದ ವಿದ್ಯಾರಣ್ಯಪುರದ ಸ್ಮಾಶನದ ಹತ್ತಿರ ಮಾದಕ ವಸ್ತು ಮಾರಾಟ ಮಾಡುತ್ತಿದ್ದಂತ ಆರೋಪಿ ಬಂಡೆ ಸಲ್ಮಾನ್ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 3.80 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಇದಲ್ಲದೇ ಆರೋಪಿ ಬಂಡೆ ಸಲ್ಮಾನ್ ಬಳಿಯಲ್ಲಿದ್ದಂತ 1 ಕಾರು, 1 ಮೊಬೈಲ್ ಕೂಡ ಜಪ್ತಿ ಮಾಡಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯವಸಾಯ ಮಾಡೋ ಹುಡುಗನನ್ನು ಮದುವೆಯಾಗೋ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ, ಸ್ಥಾನಮಾನ ಘೋಷಿಸಿ: ಸಿಎಂಗೆ ಶಾಸಕ ಪತ್ರ
ಬೆಂಗಳೂರಿನ ಕೆಇಎಗೆ ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ: ವ್ಯವಸ್ಥೆಗೆ ಪ್ರಶಂಸೆ








