ಮಂಡ್ಯ: ಜಿಲ್ಲೆಯ ಅಕ್ರಮ ಕಲ್ಲುಗಣಿಗಾರಿಕೆ ಕ್ವಾರೆಯಲ್ಲಿ ಟಿಪ್ಪರ್ ಸಮೇತ ಕೆಳಗೆ ಬಿದ್ದು ಚಾಲಕ ಸಾವನ್ನಪ್ಪಿದ್ದಾರೆ. ಕಲ್ಲು ತುಂಬಿದ ಟಿಪ್ಪರ್ ಆಯ ತಪ್ಪಿ 40 ಅಡಿ ಆಳದ ನೀರಿಗೆ ಬಿದ್ದಿರುವ ಟಿಪ್ಪರ್ ಲಾರಿ ಈ ಅವಘಡ ಸಂಭವಿಸಿದೆ.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಜಟಕ ಗೇಟ್ ಬಳಿಯ ಕಲ್ಲು ಕ್ವಾರೆಯಲ್ಲಿ ಘಟನೆ ನಡೆದಿದೆ. ಟಿಪ್ಪರ್ ಚಾಲಕ ಚಾಲಕ ಲಚ್ಚಿ @ ಲಕ್ಷ್ಮಣ (38)ಮೃತ ದುರ್ದೈವಿಯಾಗಿದ್ದಾರೆ. ಈ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಶ್ರೀ ಬಸವೇಶ್ವರ ಸ್ಟೋನ್ ಕ್ರಷರ್ ಅಗಿದೆ.
ರವಿ& ಕಾಂತ ಎಂಬ ಸಹೋದರರ ಮಾಲಿಕತ್ವದಲ್ಲಿ ಅನುಮತಿ ಇಲ್ಲದೆ ನಡೆಯುತ್ತಿರೋ ಕ್ರಷರ್ ಇದಾಗಿದೆ. ಟಿಪ್ಪರ್ ಸಮೇತ 40 ಅಡಿ ಆಳವಾಗಿರೋ ನೀರಿರೋ ಜಾಗಕ್ಕೆ ಬಿದ್ದಿರುವ ಚಾಲಕ ಲಚ್ಚಿ ಮೃತ ದೇಹ ಮತ್ತು ಟಿಪ್ಪರ್. ಟಿಪ್ಪರ್ ಮೇಲೆತ್ತಲು ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಿಂದ. ಕಾರ್ಯಾಚರಣೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಂದ ಸ್ಥಳ ಪರಿಶೀಲನೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ








