ಬೆಂಗಳೂರು: ಸಾಗರ ತಾಲ್ಲೂಕಿನ ಡಿ.ಮಹಾಬಲೇಶ್ವರ ಲಿಂಗದಹಳ್ಳಿಯವರ ಪುತ್ರ ಡಾ.ಎಲ್ ಎಂ ಸುರೇಶ್ ಕೀನ್ಯಾ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೌರವಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆಯಿಂದ ತೃತೀಯ ಅಖಿಲ ಭಾರತ ವಿಶ್ವ ಹವ್ಯಕ ಮಹಾ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಶಿವಮೊಗ್ಗದ ಡಾ.ಎಲ್ ಎಂ ಸುರೇಶ್ ಕೀನ್ಯಾ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ.
ಯಾರು ಡಾ.ಎಲ್ ಎಂ ಸುರೇಶ್ ಕೀನ್ಯಾ?
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗದಹಳ್ಳಿಯವರೇ ಡಾ.ಎಲ್ ಎಂ ಸುರೇಶ್ ಆಗಿದ್ದಾರೆ. ಇವರ ತಂದೆ ದಿವಂಗತ ಮಹಾಬಲೇಶ್ವರ. ಒಬ್ಬ ಅಂತರರಾಷ್ಟ್ರೀಯ ಕೃಷಿ ವಿಜ್ಞಾನಿಯಾಗಿ ಡಾ.ಎಲ್ ಎಂ ಸುರೇಶ್ ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ಕೀನ್ಯಾದ ನೈರೋಬಿಯಲ್ಲಿರುವಂತ ಅಂತರರಾಷ್ಟ್ರೀಯ ಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರದಲ್ಲಿ ಮೇಸ್ ಸ್ಪೆಷಾಲಿಟಿ ಲೀಡ್ ಆಗಿ ಡಾ.ಎಲ್ ಎಂ ಸುರೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿಯನ್ನು ಪಡೆದಂತ ಡಾ.ಎಲ್ ಎಂ ಸುರೇಶ್ ಅವರು, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ ಎಂಬಿಎ ಹಾಗೂ ಶಿವಮೊಗ್ಗ ಕುವೆಂಪು ವಿವಿಯಿಂದ ಸಸ್ಯ ರೋಗಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.
ಸಸ್ಯ ರೋಗಶಾಸ್ತ್ರ ಮತ್ತು ಸಂತಾನೋತ್ಪತ್ತಿ, ಮೆಕ್ಕೆ ಜೋಳದ ರೋಗಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ನಿರೋಧಕತೆಯಲ್ಲಿ ಕಾರ್ಯತಂತ್ರ ಇವುಗಳ ಬಗ್ಗೆ ಮಹತ್ವದ ಸಂಶೋಧನೆಯನ್ನು ಡಾ.ಎಲ್ ಎಂ ಸುರೇಶ್ ಮಾಡಿದ್ದಾರೆ.
ಮೆಕ್ಕೆ ಜೋಳವನ್ನು ಪ್ರಧಾನ ಬೆಳೆಯಾಗಿ ಬೆಳೆಯುವ 300 ಮಿಲಿಯನ್ ಆಫ್ರಿಕನ್ ರೈತರ ಜೀವನೋಪಾಯಕ್ಕೆ ಸಹಕಾರ ಮಾಡಿರುವಂತ ಇವರಿಗೆ ಈಗಾಗಲೇ ಹಲವಲು ರಾಷ್ಟ್ರೀಯ, ಅಂತರರಾಷ್ಟ್ರೀ ಪ್ರಶಸ್ತಿಗಳು ಬಂದಿವೆ. ಈಗ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿದೆ.
ಇಂತಹ ಪ್ರಶಸ್ತಿಗೆ ಭಾಜನರಾದಂತ ಡಾ.ಸುರೇಶ್ ಕೀನ್ಯಾ ಅವರಿಗೆ ಸಾಗರದ ತಾಲ್ಲೂಕಿನ ಜನರು, ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಸಾಗರದ ಪ್ರಸಿದ್ಧ ಮಾಧ್ಯಮವಾದಂತ “ಸುದ್ದಿ ಸಾಗರ”ವು ಶುಭಾಶಯ ತಿಳಿಸಿದೆ.
ವರದಿ: ಉಮೇಶ್ ಮೊಗವೀರ, ಸಾಗರ
BREAKING: ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ: ಕಂದಕಕ್ಕೆ ಉರುಳಿ ಬಿದ್ದು ಮೂವರು ದುರ್ಮರಣ