ಬೆಂಗಳೂರು: ರಾಜ್ಯದಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಅವಕಾಶ ಇಲ್ಲದಿದ್ದರೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಭಾಗದ ಮುಖ್ಯಸ್ಥ ಡಾ.ಎಚ್. ಎಲ್. ವಿಶ್ವನಾಥ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡಾ.ಎಚ್.ಎಂ.ಶ್ರೀಕಾಂತ್, ವೈದ್ಯ ವೃತ್ತಿ ಬದಲು ‘ಡಿ’ದರ್ಜೆ ನೌಕರರಂತೆ ಕಡತ ನಿರ್ವಹಣೆಯಲ್ಲಿ ತೊಡಗಿರುವ ಕುರಿತು ಜನತಾ ಪಕ್ಷ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ಗೆ ದೂರು ಕೊಟ್ಟಿತ್ತು. ದೂರಿನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಡಾ.ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶಾಲಯ ಆದೇಶಿಸಿತ್ತು. ಅದರಂತೆ, ಸಮಿತಿಯು ಶುಕ್ರವಾರ ದೂರುದಾರರನ್ನು ಕರೆದು ಅಗತ್ಯ ಮಾಹಿತಿ ಪಡೆದಿತ್ತು. ಶ್ರೀಕಾಂತ್ ವಿರುದ್ಧ ಕೇಳಿಬಂದಿರುವ ದೊಡ್ಡಮಟ್ಟದ ಅವ್ಯವಹಾರವನ್ನು ಮುಚ್ಚಿಹಾಕಲು ರಾಜಕೀಯ ಪ್ರಭಾವ ಬೀರಿ ವಿಶ್ವನಾಥ್ ಅವರನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಗಿದೆ.
ದೂರಿನ ವಿವರ
ಬೌರಿಂಗ್ ಸಂಸ್ಥೆ ಅಧೀನದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯ ವೃತ್ತಿ ಬದಲು ‘ಡಿ’ದರ್ಜೆ ನೌಕರರಂತೆ ಕಡತ ನಿರ್ವಹಣೆಯಲ್ಲಿ ತೊಡಗಿರುವ ಡಾ.ಎಚ್.ಎಂ.ಶ್ರೀಕಾಂತ್ ಅವರನ್ನು ಅಮಾನತು ಮಾಡಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ಗೆ, ಜನತಾ ಪಕ್ಷ ದೂರು ಕೊಟ್ಟಿತ್ತು. ಬಡ ಮತ್ತು ಮಧ್ಯಮ ವರ್ಗದ ಹೆಚ್ಚಿನ ಸಂಖ್ಯೆಯ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಹೀಗಿದ್ದರೂ, ವೈದ್ಯ ವೃತ್ತಿ ಬಿಟ್ಟು ವೈದ್ಯಕೀಯ ಕಾಲೇಜಿನ ಸಂಬಂಧಿಸಿದ ಕಡತಗಳ ನಿರ್ವಹಣೆಗೆ, ನಿರ್ದೇಶಕರ ವ್ಯಾಪ್ತಿಗೆ ಬರುವ ಕಡತಗಳ ಪರಿಶೀಲನೆ, ಆಸ್ಪತ್ರೆಗಳು, ಶೂಶ್ರಷ ಶಾಲೆ ಮತ್ತು ಪ್ಯಾರ ಮೆಡಿಕಲ್ ಸಂಬಂಧಿಸಿತ ಕೆಲಸ ನಿರ್ವಹಣೆ ಹಾಗೂ ಆಸ್ಪತ್ರೆಗೆ ಬರುವ ವಿಐಪಿ, ವಿವಿಐಪಿಗಳ ಶಿಷ್ಠಚಾರ ಸಂಯೋಜನೆ ಮಾಡುವ ಕಾರ್ಯನಿರ್ವಹಣೆ ಕೆಲಸದಲ್ಲಿ ಶ್ರೀಕಾಂತ್ ತೊಡಗಿದ್ದಾರೆ. ವೈದ್ಯರು ಕಡತ ವಿಲೇವಾರಿ ಹಾಗೂ ಆರ್ಥಿಕ ನಿರ್ವಹಣೆ ಜವಾಬ್ದಾರಿ ನೀಡಿರುವುದು ಅವ್ಯವಹಾರ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟದಂತಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಸಚಿವರಿಗೆ ಕೊಟ್ಟಿರುವ ದೂರಿನಲ್ಲಿ ಉಲ್ಲೇಖಿಸಿದ್ದರು.
ಡೀಪ್ಫೇಕ್ ವಿಡಿಯೋ ಮಾಡಿದ ಆರೋಪಿ ಬಂಧನ- ರಶ್ಮಿಕಾ ಮಂದಣ್ಣ ಹೇಳಿದ್ದನು?
BIG NEWS: ‘ಸಿದ್ಧಗಂಗಾ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡುವಂತೆ ‘ಕೇಂದ್ರ ಸರ್ಕಾರ’ಕ್ಕೆ ಪತ್ರ – ಸಿಎಂ ಸಿದ್ಧರಾಮಯ್ಯ