ಶಿವಮೊಗ್ಗ: ಜಿಲ್ಲೆಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವಂತ ಡಾ.ಜಿ.ಕೆ ಪ್ರೇಮಾ ಅವರಿಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಿಂದ ಪ್ರತಿ ವರ್ಷ ಕೊಡುವಂತ ಡಿಹೆಚ್ ಚಾಲೆಂಜರ್ಸ್-2024ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಶಿವಮೊಗ್ಗ ನಗರದಲ್ಲಿರುವಂತ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವಂತ ಡಾ.ಜಿ ಕೆ ಪ್ರೇಮಾ, ಕಾಡುಗೊಲ್ಲ ಸಮುದಾಯದ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದವರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಯ್ಯನಹಟ್ಟಿಯಲ್ಲಿ ಕಲ್ಲಪ್ಪ.ಜಿ ಹಾಗೂ ಯಶೋಧಮ್ಮ ದಂಪತಿಯ ಮೊದಲ ಪುತ್ರಿಯಾಗಿ ಜನಿಸಿದಂತ ಇವರ ಸಾಧನೆ ಎಲೆಯ ಮರೆಯ ಕಾಯಿಯಂತೆ.
ಕಾಡುಗೊಲ್ಲ ಸಮುದಾಯದಲ್ಲಿನ ಮುಟ್ಟು, ಹೆರಿಗೆಯಾದ ನಂತ್ರ ಬಾಣಂತಿಯರನ್ನು ಹಟ್ಟಿಯಿಂದ ಹೊರಗಿಡೋದೋ ಸೇರಿದಂತೆ ವಿವಿಧ ಸಂಪ್ರದಾಯಗಳನ್ನು ತ್ಯಜಿಸಿ, ಸ್ವಚ್ಛತೆಯ ಕಡೆಗೆ ಗಮನಕೊಟ್ಟು, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ಕಾಡುಗೊಲ್ಲ ಮಹಿಳೆಯರ ಬಗ್ಗೆ ಇವರ ಮಹಾ ಪ್ರಬಂಧಕ್ಕೆ ಕುವೆಂಪು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಇಂತಹ ಎಲೆಮರೆಯ ಕಾಯಿಯಂತೆ ತನ್ನ ಸಮುದಾಯದ ವಿವಿಧ ಜನಪರ ಕೆಲಸಗಳಲ್ಲಿ ತೊಡಗಿರುವಂತ ಡಾ.ಜಿಕೆ ಪ್ರೇಮಾ ಅವರ ಸಾಧನೆಯನ್ನು ಗುರುತಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ನೀಡುವಂತ 2024ನೇ ಸಾಲಿನ ಡಿಹೆಚ್ ಚಾಲೆಂಜರ್ಸ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪಾಠ ಪ್ರವಚನದ ಜೊತೆಗೆ ಸಮುದಾಯ ಮತ್ತು ಮಹಿಳೆಯರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಇಂತಹವರು ಇನ್ನು ಅತಿಥಿ ಉಪನ್ಯಾಸಕಿಯಾಗಿರುದು ದುರಂತ ಸ್ವಾಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಸಮಾಜ ಸೇವೆಯನ್ನು ಮಾಡುತ್ತಿರುವ ಇವರು ಶೈಕ್ಷಣಿಕ ಸಾಧನೆಯಲ್ಲು ಮುಂದಿದ್ದಾರೆ. ವಿಶ್ವವಿದ್ಯಾಯಗಳಲ್ಲಿ ಉನ್ನತ ಮಟ್ಟದಲ್ಲಿರಬೇಕಾದ ಎಲ್ಲಾ ಅರ್ಹತೆಗಳನ್ನು ಗಳಿಸಿಕೊಂಡಿದ್ದಾರೆ.
ಇಂತಹ ಇವರಿಗೆ ಜನವರಿ.19ರಂದು ಬೆಂಗಳೂರು ಇಂಟರ್ನಾಷನಲ್ ಸೆಂಟರ್ ನಲ್ಲಿ ಸಂಜೆ.4 ಗಂಟೆಗೆ ನಡೆಯುವಂತ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಜಿ.ಕೆ ಪ್ರೇಮಾ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಅವರ ಸಾಧನೆಯ ಬಗೆಗಿನ ಪುಟ್ಟ ಕಿರುಪರಿಚಯಾತ್ಮಕ ವೀಡಿಯೋ ಈ ಕೆಳಗಿದೆ. ತಪ್ಪದೇ ಇಲ್ಲಿ ಕ್ಲಿಕ್ ಮಾಡಿ ನೋಡಿ.