ಬೆಂಗಳೂರು: ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಡಾ.ಜಿ.ಕೆ ಪ್ರೇಮ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಇಂದು ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 28(1)(ಜಿ)ರಡಿ ಪ್ರದತ್ತವಾದಂತ ಅಧಿಕಾರವನ್ನು ಚಲಾಯಿಸಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ರ ಪ್ರಕರಣ 39(1)ರ ಉಪಬಂಧಕ್ಕೊಳಪಟ್ಟು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶಿಸಿದೆ ಎಂದಿದ್ದಾರೆ.
ಹೀಗಿದೆ ದಾವಣಗೆರೆ ವಿಶ್ವವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯರ ಪಟ್ಟಿ
- ಡಾ.ಜಿ.ಕೆ ಪ್ರೇಮ, ಚಿತ್ತಯ್ಯನಹಟ್ಟಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- ಎಂಎ, ಪಿಹೆಚ್.ಡಿ- ಮಹಿಳೆ
- ದ್ಯಾಮಪ್ಪ, ಬೆಂಚಕಟ್ಟೆ, ಜಗಳೂರು ತಾಲ್ಲೂಕು – ಎಂಎ, ಇಂಗ್ಲೀಷ್ – ಪರಿಶಿಷ್ಟ ಜಾತಿ
- ಶಬೀರ್ ಆಲಿಖಾನ್, ನರಸರಾಜ್ ಪೇಟೆ, ದಾವಣಗೆರೆ – ಬಿಎಸ್ಸಿ, ಅಲ್ಪ ಸಂಖ್ಯಾತ
- ತಿಪ್ಪೇಸ್ವಾಮಿ ಹೆಚ್, ಚಳ್ಳಕೆರೆ, ಚಿತ್ರದುರ್ಗ – ಎಂಪಿಇಡಿ, ಎಂಫಿಲ್, ಎನ್ ಎಸ್, ಎನ್ಐಎಸ್, ಡಿಪ್ಲೋಮಾ(ಪಿಹೆಚ್ ಡಿ) – ಹಿಂದುಳಿದ ವರ್ಗ
- ಪ್ರಶಾಂತ್ ಆರ್.ಟಿ, ದಾವಣಗೆರೆ – ಡಿಪ್ಲೋಮಾ ( ಇ ಅಂಡ್ ಸಿ), ಬಿಎಸ್ಸಿ – ಸಾಮಾನ್ಯ
- ಡಾ.ಪ್ರಶಾಂತ್ ಎನ್ ಸಿ, ದಾವಣಗೆರೆ- ಎಂಬಿಎ, ಪಿಹೆಚ್.ಡಿ – ಸಾಮಾನ್ಯ
ಸಿಂಡಿಕೇಟ್, ಪ್ರಾಧಿಕಾರಗಳ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರ ಪದಾವಧಿಯನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಪ್ರಕರಣ 38 ರಲ್ಲಿ 03 ವರ್ಷಗಳಿಗೆ ಗೊತ್ತುಪಡಿಸಲಾಗಿದ್ದರೂ, ಸಹ ಪುಕರಣ 39(1) de ನಿಯಮಿಸಿರುವಂತೆ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಕ್ಕೆ ನಾಮನಿರ್ದೇಶಿತನಾದ ಯಾವೊಬ್ಬ ಸದಸ್ಯನು ನಾಮನಿರ್ದೇಶಿತ ಪ್ರಾಧಿಕಾರ ಇಷ್ಟಪರ್ಯಂತ ಸದಸ್ಯತ್ವದ ಪದಧಾರಣೆ ಮಾಡಬೇಕಾಗುತ್ತದೆ. ಇದೇ ನ್ಯಾಯಿಕ ಅನುಪಾತವನ್ನು ರಿಟ್ ಅರ್ಜಿ ಸಂಖ್ಯೆ: 25964-967/2013 (enders) c/w ರಿಟ್ ಅರ್ಜಿ ಸಂಖ್ಯೆ: 25612/2013 ಮತ್ತು 26170-26171/2013 ರ ಪುಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ಪ್ರತಿಪಾದಿಸಲಾಗಿದೆ.
WOOD, OM Narain Agarwal and Others V/S Nagara Palike, Shahahjahanpur and others (AIR 1993 SC 1440) ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪ್ರತಿಪಾದಿಸಿರುವಂತೆ, ಚುನಾಯಿತ ಅಥವಾ ನೇಮಕಾತಿ ಹೊಂದಿದ ಸದಸ್ಯರಿಗೆ ಭಿನ್ನವಾದ ಗುಂಪಿಗೆ ಸೇರುವ ನಾಮನಿರ್ದೇಶಿತ ಸದಸ್ಯರು, ಚುನಾಯಿತ ಅಥವಾ ನೇಮಕಾತಿ ಹೊಂದಿದ ಸದಸ್ಯರ ಸಮಾನತೆಗೆ ಅಥವಾ ಸಾದೃಶ್ಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಸಲ್ಲಿಸಲು ಅರ್ಹರಾಗದೇ, ನಾಮನಿರ್ದೇಶನ ಪ್ರಾಧಿಕಾರದ ಇಷ್ಟಪರ್ಯಂತಕ್ಕೆ ಒಳಪಡುತ್ತಾರೆ. ಆದುದರಿಂದ, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಮೇಲಿನ ಕೋಷ್ಟಕದಲ್ಲಿ ನಮೂದು ಮಾಡಲಾಗಿರುವ ನಾಮನಿರ್ದೇಶನಗಳು ಸರ್ಕಾರದ ಇಷ್ಟಪರ್ಯಕ್ಕೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಅನ್ವಯಿಕೆ ಹೊಂದಿರುವ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಮಾಡಲಾಗಿರುವ ಪೂರ್ವ ಪಸ್ತಾಪಿತ ನಾಮನಿರ್ದೇಶನಗಳು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
1. ನಾಮನಿರ್ದೇಶಿತ ಸದಸ್ಯರು ಸಾಮಾಜಿಕ ಮೀಸಲಾತಿಯ ಬಗ್ಗೆ ಒಂದು ತಿಂಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿ/ಪಮಾಣೀಕರಿಸಿ ಪೂರಕ ದಾಖಲೆಗಳನ್ನು ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯಗಳಿಗೆ ಸಲ್ಲಿಸತಕ್ಕದ್ದು ಮತ್ತು ಆ ದಾಖಲೆಗಳನ್ನು ವಿಶ್ವವಿದ್ಯಾಲಯವು ದೃಢೀಕರಿಸಿಕೊಳ್ಳತಕ್ಕದ್ದು.
2. ನಾಮನಿರ್ದೇಶಿತ ಸದಸ್ಯರು ಪಡೆದಿರುವ ಸ್ನಾತಕ/ಸ್ನಾತಕೋತ್ತರ ಪದವಿಗಳ ನೈಜತೆ/ಋಜುತ್ವದ ಬಗ್ಗೆ ಪದವಿ ಪಡೆದ ವಿಶ್ವವಿದ್ಯಾಲಯದಿಂದ ದೃಢೀಕರಿಸಿದ ಕುರಿತು ಪಮಾಣಪತ್ರಗಳನ್ನು ಒಂದು ತಿಂಗಳ ಒಳಗಾಗಿ ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸತಕ್ಕದ್ದು. 3. ನಾಮನಿರ್ದೇಶಿತ ಸದಸ್ಯರು, ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ಅಥವಾ ವಿಶ್ವವಿದ್ಯಾಲಯದ ಯಾವುದೇ ಸ್ಥಾನಮಾನದಲ್ಲಿ ನಿಯೋಜನೆ ಹೊಂದಿರದ ಬಗ್ಗೆ, ವಿಶ್ವವಿದ್ಯಾಲಯವು ದೃಢೀಕರಿಸಿಕೊಳ್ಳತಕ್ಕದ್ದು.
4. ನಾಮನಿರ್ದೇಶಿತ ವ್ಯಕ್ತಿಗಳು ವ್ಯವಸ್ಥಾಪನಾ ಮಂಡಳಿಯ ಸದಸ್ಯರಾಗಿ ಮುಂದುವರೆಯುವುದು ಅವರ ಪದಾವಧಿಯಲ್ಲಿ ಸದ್ವರ್ತನೆ ತೋರುವ, ಸರ್ಕಾರದ ಕಾರ್ಯನೀತಿಗೆ ಬದ್ಧರಾಗಿರುವ ಹಾಗೂ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಾಂಸ್ಥಿಕ ಸ್ವಾಯತ್ತತೆ/ ಸ್ವಾವಲಂಬಿತನವನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಷರತ್ತಿಗೊಳಪಟ್ಟಿರುತ್ತದೆ. 5. ಈ ಷರತ್ತುಗಳ ಪಾಲನೆಯಲ್ಲಿನ ವಿಫಲತೆಯು ವ್ಯವಸ್ಥಾಪನಾ ಮಂಡಳಿ ನಾಮನಿರ್ದೇಶನವನ್ನು ಪುನರಾವಲೋಕಿಸುವ ಅಥವಾ ಹಿಂಪಡೆಯುವ ಪರಿಣಾಮ ಹೊಂದಿರುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
GOOD NEWS: ಕೇವಲ 1 ವಾರದಲ್ಲಿ ‘BPL ರೇಷನ್ ಕಾರ್ಡ್ ಸಮಸ್ಯೆ’ ಕ್ಲಿಯರ್: ಸಚಿವ ಕೆ.ಹೆಚ್ ಮುನಿಯಪ್ಪ
BREAKING : ಬೆಂಗಳೂರಲ್ಲಿ ಸಿಸಿಬಿ ಮತ್ತೊಂದು ಕಾರ್ಯಾಚರಣೆ : ಇಬ್ಬರು ವಿದೇಶಿ ಪೆಡ್ಲರ್ ಗಳ ಬಂಧನ