ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದಂತ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಂತ ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ಬಾಲಕೃಷ್ಣ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವಂತ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ.
ಡಾ|| ಜಿ.ಎಸ್.ಬಾಲಕೃಷ್ಣ, ಪ್ರಸೂತಿ ತಜ್ಞರು, ಸಾರ್ವಜನಿಕ ಆಸ್ಪತ್ರೆ ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರು ಕುಮಾರಿ. ಕಲ್ಪನ ಎಂಬ ಗರ್ಭಿಣಿಗೆ ದಿ:14.03.2020 ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು ರೂ.50,000/- ಗಳಿಗೆ ಶ್ರೀಮತಿ ಪ್ರೇಮಲತಾ ಎಂಬುವವರಿಗೆ ಮಾರಾಟ ಮಾಡಿ, ಶ್ರೀಮತಿ. ಪ್ರಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವ ಆರೋಪಕ್ಕಾಗಿ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ದುರ್ನಡತೆಯ ಆರೋಪವು ಸಾಬೀತಾಗಿರುವುದರಿಂದ, ಇವರನ್ನು ಕೆಸಿಎಸ್ (ಸಿಸಿಎ) ನಿಯಮಗಳು 1957ರ ನಿಯಮ 8(vi) ರಡಿಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾನ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು.
ಪ್ರಸ್ತಾಪಿತ ಪ್ರಕರಣದಲ್ಲಿ ಕುಮಾರಿ ಕಲ್ಪನ ಎಂಬ ಗರ್ಭಿಣಿಗೆ ದಿ:14.03.2020 ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು ಶ್ರೀಮತಿ ಪೇಮಲತಾ ಎಂಬುವವರಿಗೆ ಮಾರಾಟ ಮಾಡಿ ಶ್ರೀಮತಿ ಪ್ರೇಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ದುರ್ನಡತೆ ಸಾಬೀತಾಗಿರುವುದರಿಂದ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನಿಸಿದೆ ಎಂದರು.