ಗಾಝಾ: ಉತ್ತರ ಗಾಝಾ ಪಟ್ಟಿಯಲ್ಲಿರುವ ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ)ಯ ಚಿಕಿತ್ಸಾಲಯದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 19 ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಮಂದಿ ಗಾಯಗೊಂಡಿದ್ದಾರೆ
ಪಟ್ಟಿಯ ಉತ್ತರದಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಆಶ್ರಯ ನೀಡುತ್ತಿರುವ ಯುಎನ್ಆರ್ಡಬ್ಲ್ಯೂಎ ಕ್ಲಿನಿಕ್ ಮೇಲೆ ಇಸ್ರೇಲಿ ವಿಮಾನಗಳು ದಾಳಿ ನಡೆಸಿದವು, ಇದರ ಪರಿಣಾಮವಾಗಿ ಹಲವಾರು ಸಾವುಗಳು ಮತ್ತು ಗಾಯಗಳು ಸಂಭವಿಸಿವೆ ಮತ್ತು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ, ಕೇಂದ್ರ ಪ್ರದೇಶದ ಅಲ್-ಬುರೇಜ್ ನಿರಾಶ್ರಿತರ ಶಿಬಿರ, ಮಧ್ಯ ಮತ್ತು ಉತ್ತರ ಖಾನ್ ಯೂನಿಸ್, ಪೂರ್ವದ ಮಾನ್ ಪ್ರದೇಶ, ಅಲ್-ಜೆನೆನಾ ನೆರೆಹೊರೆ, ಖಿರ್ಬತ್ ಅಲ್-ಅಡಾಸ್, ಅಲ್-ಮಶ್ರು ಪ್ರದೇಶ ಮತ್ತು ರಫಾದ ಉತ್ತರ ಭಾಗಗಳು, ಅಲ್-ಮಾವಾಸಿ, ಮಧ್ಯ ಗಾಝಾದ ಪೂರ್ವ ಅಲ್-ನುಸೆರಾತ್ ಶಿಬಿರ ಸೇರಿದಂತೆ ಗಾಝಾ ಪಟ್ಟಿಯಾದ್ಯಂತ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಡಜನ್ಗಟ್ಟಲೆ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ.