ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಕಣ್ಣುಗಳು ಎಲ್ಲರಿಗೂ ಮುಖ್ಯ. ಕಣ್ಣುಗಳಿಲ್ಲದಿದ್ದರೆ ಜಗತ್ತು ಕತ್ತಲೆಯಾಗುತ್ತಿತ್ತು. ಕಣ್ಣುಗಳನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದು ತಜ್ಞರು ಪದೇ ಪದೇ ಹೇಳುತ್ತಾರೆ. ಕಣ್ಣಿಗೆ ಸಣ್ಣ ಸಮಸ್ಯೆ ಬಂದರೂ ತೀವ್ರ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಕಣ್ಣಿನ ಸಮಸ್ಯೆಗಳಿಗೆ ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಅಲ್ಲದೇ ಕಣ್ಣಿನ ಸಮಸ್ಯೆಗೆ ನಾನಾ ರೀತಿಯ ಐ ಡ್ರಾಪ್’ಗಳಿದ್ದರೂ ಭಾರತದ ಫಾರ್ಮಾಸ್ಯುಟಿಕಲ್ ಕಂಪನಿ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಇಂತಹ ಐ ಡ್ರಾಪ್ ಮಾಡಿದೆ. ಈ ಡ್ರಾಪ್ ಹಾಕಿಕೊಳ್ಳುವ ಮೂಲಕ, ಹತ್ತಿರದ ವಸ್ತುಗಳನ್ನ ಸ್ಪಷ್ಟವಾಗಿ ನೋಡಬಹುದು.
ದೃಷ್ಟಿ ಸಮಸ್ಯೆ ಇರುವವರು ಈ ಡ್ರಾಪ್ ಹಾಕಿಕೊಂಡರೆ ದೀರ್ಘಕಾಲದವರೆಗೆ ಕಣ್ಣಿಗೆ ಕನ್ನಡಕ ಧರಿಸುವುದನ್ನ ತಪ್ಪಿಸಬಹುದು. ಈ ಹನಿಯ ಹೆಸರು ಪ್ರೆಸ್ವು ಐ ಡ್ರಾಪ್). ಈ ಐ ಡ್ರಾಪ್’ನ್ನ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DGCI) ಸಹ ಅನುಮೋದಿಸಿದೆ. ಆದರೆ ಈ ಡ್ರಾಪ್ ಹಾಕಿದರೆ ಕನ್ನಡಕದ ಅಗತ್ಯ ಶಾಶ್ವತವಾಗಿ ತೆಗೆಯುವುದಿಲ್ಲ ಎನ್ನುತ್ತಾರೆ ತಜ್ಞರು.
270 ರೋಗಿಗಳ ಮೇಲೆ 3ನೇ ಹಂತದ ಕ್ಲಿನಿಕಲ್ ಅಧ್ಯಯನದಿಂದ ಡೇಟಾವನ್ನ ಸಲ್ಲಿಸಿದ ನಂತರ ಔಷಧವು ತಜ್ಞರ ಸಮಿತಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದನೆಯನ್ನು ಪಡೆಯಿತು. ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನಿಖಿಲ್ ಕೆ ಮಸೂರ್ಕರ್ ಅವರು ಈ ಔಷಧವು ಅಕ್ಟೋಬರ್’ನಲ್ಲಿ ಲಭ್ಯವಿರುತ್ತದೆ ಮತ್ತು ಪ್ರಿಸ್ಕ್ರಿಪ್ಷನ್-ಮಾತ್ರ ಔಷಧವಾಗಿದೆ.
ಈ ಕಣ್ಣಿನ ಹನಿಗಳನ್ನ ಕಣ್ಣಿಗೆ ಹಾಕಿಕೊಂಡರೆ ಸುಮಾರು 6 ಗಂಟೆಗಳ ಕಾಲ ಕೆಲಸ ಮಾಡುತ್ತೆ. ಅಂದ್ರೆ ಆ ಆರು ಗಂಟೆ ಕನ್ನಡಕದ ಅವಶ್ಯಕತೆ ಇಲ್ಲ. ಈ ಹನಿಗಳಿಂದ ಹತ್ತಿರದ ವಸ್ತುಗಳನ್ನ ಸ್ಪಷ್ಟವಾಗಿ ನೋಡಬಹುದು ಎಂದು ಡಾ.ತುಷಾರ್ ಹೇಳಿದರು. ಕನ್ನಡಕಕ್ಕೆ ಪರ್ಯಾಯವಾಗಿ, ಕನ್ನಡಕವನ್ನ ಧರಿಸುವುದನ್ನು ತಪ್ಪಿಸಲು ಪ್ರತಿ 6 ಗಂಟೆಗಳಿಗೊಮ್ಮೆ ಈ ಹನಿಗಳನ್ನು ಕಣ್ಣುಗಳಿಗೆ ಹಾಕಿಕೊಳ್ಳಬೇಕು.
ದೀರ್ಘಾವಧಿಯ ಪರಿಹಾರವಲ್ಲ: ತಜ್ಞರು
ಔಷಧಿಯ ಒಂದು ಹನಿ ಕೇವಲ 15 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತೆ ಮತ್ತು ಮುಂದಿನ ಆರು ಗಂಟೆಗಳವರೆಗೆ ಪರಿಣಾಮ ಇರುತ್ತದೆ. ಮೊದಲ ಹನಿಯ ಮೂರರಿಂದ ಆರು ಗಂಟೆಗಳ ಒಳಗೆ ಎರಡನೇ ಡ್ರಾಪ್ ಅನ್ವಯಿಸಿದರೆ, ಪರಿಣಾಮವು ಒಂಬತ್ತು ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ನಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ನೇತ್ರ ವಿಜ್ಞಾನದ ಕೇಂದ್ರದ ಡಾ. ರೋಹಿತ್ ಸಕ್ಸೇನಾ ಅವರ ಪ್ರಕಾರ, ಹನಿಗಳು ಅಲ್ಪಾವಧಿಗೆ ಒಳ್ಳೆಯದು ಆದರೆ ದೀರ್ಘಾವಧಿಯ ಪರಿಹಾರವನ್ನ ನೀಡುವುದಿಲ್ಲ. ಈ ಕಣ್ಣಿನ ಹನಿಗಳ ಪರಿಣಾಮವು 4-6 ಗಂಟೆಗಳವರೆಗೆ ಇರುತ್ತದೆ. ದಿನಕ್ಕೆ 1-2 ಹನಿಗಳು ಬೇಕಾಗುವುದರಿಂದ ಇದು ಓದುವ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಾಗಿದೆ ಎಂದು ಅವರು ಹೇಳಿದರು.
ಈ ಕಣ್ಣಿನ ಹನಿಗಳು ನಿಜಕ್ಕೂ ಉಪಯುಕ್ತವಾಗಿವೆ. ಯಾಕಂದ್ರೆ, ಮಸುಕಾದ ದೂರ ದೃಷ್ಟಿ, ತಲೆನೋವು, ಅಪರೂಪವಾಗಿ ರೆಟಿನಾದಂತಹ ಕೆಲವು ಅಡ್ಡಪರಿಣಾಮಗಳು ಔಷಧದೊಂದಿಗೆ ಸಂಬಂಧಿಸಿರುತ್ತವೆ.
ಪವಿತ್ರಾಗೌಡಳ ನೆಚ್ಚಿನ ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ : ಕಾರಣ ಏನು ಗೊತ್ತ?
ಅಮೆರಿಕಾದಲ್ಲಿ ‘ಚೀನಾ’ ಕೊಂಡಾಡಿದ ‘ರಾಹುಲ್ ಗಾಂಧಿ’, “ದೇವತಾ ಎಂದರೆ ದೇವರು ಎಂದರ್ಥವಲ್ಲ” ಎಂದಿದ್ದೇಕೆ.?