ಬೆಂಗಳೂರು: ರಾಜ್ಯದಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್ ನೀಡೋದಕ್ಕೂ ಅವಕಾಶವಿದೆ. ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗದವರಿಗೆ ಸರ್ಕಾರಿ ದರದಲ್ಲಿ ನಿವೇಶನ ನೀಡಲು ಕಾನೂನಿನಡಿ ಅವಕಾಶವಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ.
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ.
ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.
ತಹಶೀಲ್ದಾರ್ ಕೈಪಿಡಿಯಲ್ಲಿನ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ 20×30 ಅಡಿ ವಿಸ್ತೀರ್ಣದ ನಿವೇಶನ ಜಮೀನಿಗೆ ಮಾತ್ರ ಹಕ್ಕು ಪತ್ರ ನೀಡಲು ತಹಶೀಲ್ದಾರರಿಗೆ ಅಧಿಕಾರ ಇರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ 30×40ರ ಅಳತೆಯ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ.
ತಹಶೀಲ್ದಾರರ ಕೈಪಿಡಿಯಲ್ಲಿ ಏನಿದೆ.?
ಮಂಜೂರಾದ ನಿವೇಶನದ ಮೌಲ್ಯ
ಷೆಡ್ಯೂಲ್‌ನಲ್ಲಿ ವಿಧಿಸಿರುವ ದರದಂತೆ ಮಂಜೂರಾದ ಜಮೀನಿನ ಮೌಲ್ಯವನ್ನು ಮಂಜೂರಾ ದಿನಾಂಕದಿಂದ 2 ತಿಂಗಳೊಳಗಾಗಿ ಪಾವತಿಸತಕ್ಕದ್ದು.
1. ಪ.ಜಾತಿ/ಪ. ಪಂಗಡದವರಿಗೆ ಶೇ. 50 ರಷ್ಟು ವಿನಾಯಿತಿ.
2. ಆರ್ಥಿಕ ಹಿಂದುಳಿದ ವರ್ಗದವರಿಗೆ ನಗರಪ್ರದೇಶದಲ್ಲಿ 20 X 30ರ ವಿಸ್ತೀರ್ಣ, ಗ್ರಾಮೀಣ ಪ್ರದೇಶದಲ್ಲಿ 30 X 40ರ ವಿಸ್ತೀರ್ಣದ ನಿವೇಶನದ ಜಮೀನಿಗೆ ಯಾವುದೇ ಮೌಲ್ಯ ಪಾವತಿಸುವುದರಿಂದ ವಿನಾಯಿತಿ. (ನಿ. 6)
ಪರಂತು ನಗರ ಪ್ರದೇಶದಲ್ಲಿ 20 X 30ರ ಮತ್ತು ಗ್ರಾಮೀಣ ಪ್ರದೇಶದಲ್ಲಿ 30 X 40 ಅಳತೆಯ ನಿವೇಶನಗಳಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳು ಯಾವುದೇ ಮೊಬಲಗು ಸಂದಾಯ ಮಾಡತಕ್ಕದ್ದಲ್ಲ. (ಅಧಿಸೂಚನೆ ಸಂ:ಆರ್.ಡಿ22.ಎಲ್.ಜಿ.ಪಿ2004, ದಿನಾಂಕ: 26-8-2005).
ಸೋ ಈ ಮೇಲಿನ ನಿಯಮದಡಿ ಸರ್ಕಾರಿ ಸೈಟ್ ಪಡೆಯಲು ನಿವೇಶನ ರಹಿತರಿಗೆ ಅವಕಾಶವಿದೆ. ನಿವೇಶನ ರಹಿತರು ಸರ್ಕಾರಿ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳು, ಉಪ ವಿಭಾಗೀಯ ಅಧಿಕಾರಿಗಳು, ತಹಶೀಲ್ದಾರ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಹರಿದ್ದರೇ ಸರ್ಕಾರಿ ನಿವೇಶನ ಹಂಚಿಕೆ ಮಾಡಲಿದೆ.
ರಾಜ್ಯದ ಜನರಿಗೆ ಮಹತ್ವದ ಮಾಹಿತಿ: ‘ಉಚಿತ ಗೋಮಾಳ’ ಒದಗಿಸಲು ನಿಯಮಗಳೇನು.? ಇಲ್ಲಿದೆ ಮಾಹಿತಿ
BREAKING : ಬೆಂಗಳೂರಲ್ಲಿ ವಕೀಲೆಯ ಮೇಲೆ ‘ಲೈಂಗಿಕ ದೌರ್ಜನ್ಯ’ ನಡೆಸಿ ಹಲ್ಲೆ : IT ಅಧಿಕಾರಿಯ ವಿರುದ್ಧ ‘FIR’ ದಾಖಲು!