ಬೆಂಗಳೂರು: ಕೆಲಸ ಮಾಡದ ಮೈಸೂರಿನ ತಹಶೀಲ್ದಾರರೇ ನಿಮಗೆ ನಾಚಿಕೆ ಆಗಲ್ವ? ನಿಮಗೆ ಮನುಷ್ಯತ್ವ ಇಲ್ವ? ಎಂದು ಅಧಿಕಾರಿಗಳನ್ನು ಇಂದಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಗರ್ ಹುಕುಂ ಅರ್ಜಿ ವಿಲೇ, ನಮೂನೆ 1-5 ಹಾಗೂ ನಮೂನೆ 6-10 ದುರಸ್ಥಿ ಕೆಲಸ ಹಾಗೂ ತಹಶೀಲ್ದಾರ್ ತಕರಾರು ಅರ್ಜಿ ವಿಲೇ ಕೆಲಸದಲ್ಲೂ ಮೈಸೂರು ಸಾಕಷ್ಟು ಹಿಂದೆ ಬಿದ್ದಿದೆ. ಹೀಗಾಗಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್ ಗಳನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, “ಮೈಸೂರು ಜಿಲ್ಲೆ ಕಳಪೆಯಲ್ಲಿ ಕಳಪೆ ಜಿಲ್ಲೆಯಾಗುತ್ತಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಮನುಷ್ಯತ್ವ ಇದೆಯಾ? ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಾಚಿಕೆ ಆಗಲ್ವ? ಎಂದು ಕಿಡಿಕಾರಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.
GOOD NEWS: ರಾಜ್ಯದ ‘ಬಗರ್ ಹುಕುಂ’ ಸಾಗುವಳಿದಾರರಿಗೆ ಸಿಹಿಸುದ್ದಿ: ಡಿಸೆಂಬರ್ ಮೊದಲ ವಾರ ‘ಭೂಮಿ ಮಂಜೂರು ಫಿಕ್ಸ್’
ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ