ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಇಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ ಜೈಲುಪಾಲಾಗೋದಕ್ಕೆ ಹೊರಟು, ಪೊಲೀಸ್ ವಾಹನದಲ್ಲಿ ಕುಳಿತಿದ್ದಂತ ಅವರಿಗೆ ತಲೆ ಕೆಡಿಸಿಕೊಳ್ಳಬೇಡಿ ಸರ್, ಧೈರ್ಯವಾಗಿರಿ ಅಂತ ಧೈರ್ಯವನ್ನು ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಂತ ನಟ ದರ್ಶನ್ ಅವಧಿ ಇಂದು ಅಂತ್ಯಗೊಂಡಿತ್ತು. ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್ ಜುಲೈ.4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.
ಜೈಲು ಶಿಕ್ಷೆಗೆ ಗುರಿಯಾದ ನಟ ದರ್ಶನ್ ಪೊಲೀಸ್ ವಾಹನದಲ್ಲಿ ಕುಳಿತಿದ್ದಂತ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಧೈರ್ಯ ಹೇಳಿದ್ದಾರೆ. ಈ ಥರದ್ದು ಬೇಜಾನ್ ಆಗಿದ್ದಾವೆ ಸರ್. ನೀವು ತಲೆಕೆಡಿಸಿಕೊಳ್ಳಬೇಡಿ ಸರ್. ನಿಮ್ಮ ಹಿಂದೆ ಅಭಿಮಾನಿಗಳು ಬರುತ್ತಾರೆ. ನೀವು ಅರಾಮಾಗಿ ಇರಿ ಅಂತ ಧೈರ್ಯ ತುಂಬಿದ್ದಾನೆ ಎನ್ನಲಾಗಿದೆ.
BIG NEWS: ರೇಣುಕಾಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಗೆ ವಿಚಾರಾಣಾಧೀನ ಕೈದಿ ನಂಬರ್ 6106 ನೀಡಿಕೆ | Actor Darshan
‘ದ್ವಿತೀಯ PU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಪರೀಕ್ಷೆ-3ಕ್ಕೆ ಉಚಿತವಾಗಿ ‘BMTC’ ಬಸ್’ನಲ್ಲಿ ತೆರಳಲು ಅವಕಾಶ