ಬೆಂಗಳೂರು: ಮಕ್ಕಳಿಗೆ ಮಾನಸೀಕ ಒತ್ತಡವನ್ನು ತಗ್ಗಿಸಿ, ಬೌದ್ಧಿಕ ಬೆಳವಣಿಗೆ ಹೆಚ್ಚಿಸೋ ನಿಟ್ಟಿನಲ್ಲಿ ಈ ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುತ್ತಿದೆ. ಸಪ್ಲಿಮೆಂಟರಿ ಪರೀಕ್ಷೆಯನ್ನು ರದ್ದುಗೊಳಿಸಿ, ಮೂರು ಬಾರಿ ಮುಖ್ಯ ಪರೀಕ್ಷೆಯನ್ನೇ ನಡೆಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳೇ ಎಕ್ಸಾಂನಲ್ಲಿ ಫೇಲ್ ಆದ್ರೂ ತಲೆ ಕೆಡಿಸಿಕೊಳ್ಳಬೇಡಿ. ಮೂರು ಬಾರಿಯೂ ಮುಖ್ಯ ಪರೀಕ್ಷೆ ಬರೆಯೋದಕ್ಕೆ ಅವಕಾಶ ಸಿಗಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮುಂಚೆ ಸೆಪ್ಲಿಮೆಂಟರಿ ಪರೀಕ್ಷೆಯನ್ನು ಈ ಮೊದಲು ವಾರ್ಷಿಕ ಪರೀಕ್ಷೆಯ ನಂತ್ರ ನಡೆಸಲಾಗುತ್ತಿತ್ತು. ಅದನ್ನು ಬದಲಾವಣೆ ಮಾಡಿ ಮೂರು ಬಾರಿ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಫೇಲ್ ಆಗಿದ್ದಾರೆ ಎಂಬುದು ಮಕ್ಕಳ ಮಾರ್ಕ್ಸ್ ಕಾರ್ಡ್ ನಲ್ಲಿ ಬರಬಾರದು ಎಂಬ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ ಎಂದರು.
ಲಾಂಗ್ ಜಂಪ್ ನಲ್ಲಿ ಒಂದು, ಎರಡು ಮೂರು ಬಾರಿ ಅವಕಾಶ ನೀಡುತ್ತೀವಲ್ಲ. ಹಾಗೆಯೇ ಈ ವರ್ಷದಿಂದ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆನಂತ್ರ ಫೇಲ್ ಆದ ವಿದ್ಯಾರ್ಥಿಗಳು, ಕಡಿಮೆ ಅಂಕ ಬಂದವರು, ಮತ್ತೊಮ್ಮ, ಮಗದೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಈ ಬಾರಿ ಮೂರು ಬಾರಿ ವಾರ್ಷಿಕ ಪರೀಕ್ಷೆಯನ್ನು ನಡೆಸುತ್ತಿರೋದರಿಂದ ಎಲ್ಲಿಯೂ ವಿದ್ಯಾರ್ಥಿ ಫೇಲ್ ಆಗಿರೋ ಬಗ್ಗೆ ಮಾರ್ಕ್ಸ್ ಕಾರ್ಡ್ ನಲ್ಲಿ ಮಾಹಿತಿ ಇರೋದಿಲ್ಲ. ಅವರಿಗೆ ಈ ಮೊದಲು ಪೇಲ್ ಆಗಿದ್ದೇನೆ ಎಂಬ ಗಿಲ್ಟ್ ಕಾಡುತ್ತಿರೋದನ್ನು ನಿವಾರಿಸೋದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದರು.
‘ಪುಸ್ತಕ ಪ್ರಿಯ’ಕರ ಗಮನಕ್ಕೆ: ಫೆ.10, 11ರಂದು ಬೆಂಗಳೂರಲ್ಲಿ ‘ವೀರಲೋಕ ಪ್ರಕಾಶನ’ದಿಂದ ‘ಪುಸ್ತಕ ಸಂತೆ’
BREAKING NEWS: ‘ಮ್ಯಾನ್ಮಾರ್’ ಜೊತೆಗಿನ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿದ ‘ಭಾರತ’