ನವದೆಹಲಿ : ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ಸಾರ್ವಜನಿಕ ವೈ-ಫೈ ಬಳಸಿ ಇ-ಮೇಲ್ ಖಾತೆ ತೆರೆಯಬಾರದು ಎಂದು ಯುಜಿಸಿ ಹೇಳಿದೆ. ಅಲ್ಲದೆ ನೆಟ್ ಬ್ಯಾಂಕಿಂಗ್ ಬಳಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಯುಎಸ್ಬಿ ಚಾರ್ಜಿಂಗ್ ಪಾಯಿಂಟ್ಗಳಿಂದ ಮೊಬೈಲ್ ಚಾರ್ಜ್ ಮಾಡುವ ಮೂಲಕ ಖಾತೆಯನ್ನ ಹ್ಯಾಕ್ ಮಾಡಬಹುದು ಎಂದಿದೆ.
ಇಷ್ಟಕ್ಕೂ ವಿದ್ಯಾರ್ಥಿಗಳಿಗೆ UGC ಈ ಎಚ್ಚರಿಕೆಯನ್ನ ನೀಡಿದ್ದು ಯಾಕೆ.!
ಸೈಬರ್ ಅಪರಾಧವನ್ನ ತಡೆಯುವ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಸಹ ತೊಡಗಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ, ಸೈಬರ್ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಯುಜಿಸಿ ಎಲ್ಲಾ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನ ಕೇಳಿದೆ. ಮೇಲ್ ಮತ್ತು ಅದಕ್ಕೆ ಲಗತ್ತಿಸಲಾದ ಫೈಲ್’ಗಳನ್ನ ಎಚ್ಚರಿಕೆಯಿಂದ ತೆರೆಯಬೇಕು ಎಂದು ಆಯೋಗ ಹೇಳಿದೆ. ವಿದ್ಯಾರ್ಥಿಗಳು ಯಾವುದೇ ಸಾಫ್ಟ್ವೇರ್’ನ್ನ ಅಧಿಕೃತ ವೆಬ್ಸೈಟ್’ನಿಂದ ಮಾತ್ರ ಡೌನ್ಲೋಡ್ ಮಾಡಬೇಕು. ಕಾಲಕಾಲಕ್ಕೆ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ನವೀಕರಿಸುತ್ತಿರಿ.
UGC NET ಪ್ರವೇಶ ಕಾರ್ಡ್ ಯಾವಾಗ ಬಿಡುಗಡೆ ಮಾಡಲಾಗುತ್ತದೆ.?
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯುಜಿಸಿ ನೆಟ್ 2024 ಡಿಸೆಂಬರ್ ಸೆಷನ್ ಪರೀಕ್ಷೆಗಾಗಿ ಪರೀಕ್ಷಾ ನಗರ ಸ್ಲಿಪ್ ಬಿಡುಗಡೆ ಮಾಡಿದೆ. ಈಗ ಪ್ರವೇಶ ಪತ್ರಗಳನ್ನ ನೀಡಲಾಗುವುದು. ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಹಾಲ್ ಟಿಕೆಟ್ ಬಿಡುಗಡೆಯಾಗಲಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಪರೀಕ್ಷೆಯನ್ನು CBT ಮೋಡ್ನಲ್ಲಿ ಜನವರಿ 3ರಿಂದ ಜನವರಿ 16, 2024 ರವರೆಗೆ ನಡೆಸಲಾಗುತ್ತದೆ.
ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ: ಇದು ಲಕ್ಷಾಂತರ ಜನರ ನಂಬಿಕೆ
ಹುಬ್ಬಳ್ಳಿಯಲ್ಲಿ ಮೃತ ಅಯ್ಯ ಮಾಲಾಧಾರಿ ಕುಟುಂಬಸ್ಥರನ್ನು ಭೇಟಿಯಾದ ಸಚಿವ ಸಂತೋಷ್ ಲಾಡ್, ಸಾಂತ್ವಾನ
BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ, ಮೋಸ್ಟ್ ವಾಟೆಂಡ್ ಉಗ್ರ ‘ಮಸೂದ್ ಅಜರ್’ಗೆ ಹೃದಯಾಘಾತ ; ವರದಿ