ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವು ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನು ಮೀರಿ ಯೋಚಿಸುವುದಿಲ್ಲ ಮತ್ತು ರಾಷ್ಟ್ರೀಯ ಅಭಿವೃದ್ಧಿ ಎಂದಿಗೂ ಅವರ ಅಜೆಂಡಾದಲ್ಲಿಲ್ಲ ಎಂದು ಕಿಡಿಕಾರಿದ್ದಾರೆ.
ಛತ್ತೀಸ್‌ಗಢದಲ್ಲಿ 34,400 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, “ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಹಲವು ವರ್ಷಗಳ ಕಾಲ ದೇಶವನ್ನ ಆಳಿದೆ, ಆದರೆ ಅವರ ಗಮನ ಕೇವಲ ಸರ್ಕಾರ ರಚನೆಯತ್ತ ಮಾತ್ರವೇ ಹೊರತು ದೇಶದ ಭವಿಷ್ಯದತ್ತ ಅಲ್ಲ” ಎಂದು ಹೇಳಿದರು.
ಪ್ರಧಾನಿ ಮೋದಿ “ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಛತ್ತೀಸ್‌ಗಢದ ಅಭಿವೃದ್ಧಿಯು ಹೊಸ ಎತ್ತರವನ್ನ ತಲುಪಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ತನ್ನ ರಾಜಕೀಯ ಹಿತಾಸಕ್ತಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಮತ್ತು ರಾಷ್ಟ್ರ ನಿರ್ಮಾಣವನ್ನ ಮರೆತುಬಿಟ್ಟಿದೆ ಎಂದು ಟೀಕಿಸಿದರು. ಸರ್ಕಾರ ರಚಿಸುವುದು ಕಾಂಗ್ರೆಸ್‌ನ ಆಲೋಚನೆಯಾಗಿದ್ದು, ದೇಶವನ್ನು ಮುನ್ನಡೆಸಲು ಯಾವುದೇ ಅಜೆಂಡಾ ಇಲ್ಲ” ಎಂದು ಅವರು ಹೇಳಿದರು.
ಇಂದಿಗೂ ಕಾಂಗ್ರೆಸ್‌ನ ದಿಕ್ಕು ಹಿಂದಿನಂತೆಯೇ ಇದೆ, ಕಾಂಗ್ರೆಸ್ ಪಕ್ಷಪಾತ, ಭ್ರಷ್ಟಾಚಾರ ಮತ್ತು ಓಲೈಕೆಯನ್ನ ಮೀರಿ ಯೋಚಿಸುತ್ತಿಲ್ಲ, ತನ್ನ ಪುತ್ರರು ಮತ್ತು ಪುತ್ರಿಯರ ಭವಿಷ್ಯವನ್ನ ರೂಪಿಸುವಲ್ಲಿ ನಿರತವಾಗಿದೆ ಮತ್ತು ಭವಿಷ್ಯದ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. ಇನ್ನು ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣದಿಂದ ಮಾತ್ರ ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢವನ್ನ ನಿರ್ಮಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡುವ ಹಕ್ಕು ರಾಜಕೀಯ ಪಕ್ಷಗಳಿಗಿದೆ : ಚುನಾವಣಾ ಆಯೋಗ
ಫೆ.29ರಂದು ಲೋಕಸಭೆ ಚುನಾವಣೆಗೆ ‘ಪ್ರಧಾನಿ ಮೋದಿ ಸೇರಿ 100 ಅಭ್ಯರ್ಥಿಗಳ’ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ
‘ಬ್ರೈನ್ ಸ್ಟ್ರೋಕ್’ಗೆ ಮೊದ್ಲು ಕಾಣಿಸಿಕೊಳ್ಳೊ ಲಕ್ಷಣಗಳಿವು.! ಜಾಗರೂಕರಾಗಿರಿ