ಬೆಂಗಳೂರು : ತುಂಗಾಭದ್ರಾ ಡ್ಯಾಂ ನಾಲ್ಕೈದು ದಿನಗಳಲ್ಲಿ ದುರಸ್ತಿ ಆಗಲಿದ್ದು, ಯಾರೂ ಗಾಬರಿ ಪಡಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ನಾಲ್ಕೈದು ದಿನಗಳಲ್ಲಿ ತುಂಗಭದ್ರಾ ಡ್ಯಾಂ ದುರಸ್ತಿ ಆಗಲಿದೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ ಸಿಎಂ ಸಿದ್ದರಾಮಯ್ಯ ಸಹ ತುಂಗಾಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ನಾನು ಟೆಕ್ನಿಕಲ್ ಟೀಂ ಜೋತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಾಗಿಲ್ಲ, ನಾಲ್ಕೈದು ದಿನಗಳಲ್ಲಿ ತುಂಗಭದ್ರಾ ಡ್ಯಾಂ ದುರಸ್ತಿ ಆಗಲಿ ಎಂದು ಹೇಳಿದ್ದಾರೆ.