ಶಿವಮೊಗ್ಗ : ಯಾವುದೋ ವ್ಯಾಮೋಹದಿಂದ ಶಿಥಿಲವಾದ ಮನೆಗಳಲ್ಲಿ ವಾಸ ಮಾಡಬೇಡಿ. ಆರ್ಥಿಕವಾಗಿ ಸ್ವಲ್ಪ ಕಷ್ಟ ಎನಿಸಿದರೂ ಮಳೆಗಾಲದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಾಸ ಮಾಡದೆ ಬಾಡಿಗೆ ಮನೆಯಾದರೂ ಗಟ್ಟಿಮುಟ್ಟಾದ ಮನೆಗಳಲ್ಲಿ ವಾಸ ಮಾಡಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ರಂಗಮಂದಿರದಲ್ಲಿ ಸೋಮವಾರ ಮಳೆಯಿಂದ ಮನೆಹಾನಿಗೊಳಗಾದ ಕುಟುಂಬಗಳಿಗೆ ನಗರಸಭೆ ವತಿಯಿಂದ ಆರ್ಥಿಕ ಸಹಕಾರದ ಚೆಕ್ ವಿತರಣೆ ಮಾಡಿ ಮಾತನಾಡಿದಂತ ಅವರು, ಜೂನ್ 15ರಿಂದ ಪ್ರಾರಂಭವಾಗಬೇಕಾಗಿದ್ದ ಮಳೆ ಈ ಬಾರಿ ಮೇ ಮೊದಲ ವಾರದಿಂದಲೇ ಪ್ರಾರಂಭವಾಗಿ ದೊಡ್ಡಮಟ್ಟದ ಅನಾಹುತ ಸೃಷ್ಟಿಸಿದೆ. ನಗರವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳು ಬಿದ್ದಿದ್ದು ನಗರಸಭೆ ಅಧ್ಯಕ್ಷರು ಸದಸ್ಯರ ಜೊತೆಗೆ ಮನೆಗಳಿಗೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು. ಇದೀಗ ನಗರಸಭೆಯಿಂದ ಹೆಚ್ಚಿನ ನೆರವು ನೀಡಿದ್ದು, ಸರ್ಕಾರದಿಂದ ಸಹ ಸಹಕಾರ ಕಲ್ಪಿಸಲಾಗುತ್ತದೆ. ಸರ್ಕಾರದಿಂದ ಮನೆ ಬಿದ್ದಿದ್ದಕ್ಕೆ, ಕಾಂಪೌಂಡ್ ಗೋಡೆ ಕುಸಿತಕ್ಕೆ ಪರಿಹಾರ ನೀಡಲು ಹೊಸ ಗೈಡ್‌ಲೈನ್ ಬಂದಿದೆ. ಅಧಿಕಾರಿಗಳು ಬಡವರಿಗೆ ನೆರವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಸುಮಾರು 27 ಮನೆಗಳಿಗೆ ಪರಿಹಾರಧನದ ಚೆಕ್ಕನ್ನು ನಗರಸಭೆಯಿಂದ ನೀಡಲಾಗಿದೆ. ವಿಪರೀತ ಮಳೆಯಿಂದಾಗಿ ನಗರವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಅನಾಹುತ ಸಂಭವಿಸಿದೆ. ಮನೆ ಹಾನಿಗೊಳಗಾದವರು ಆತಂಕ ಪಡುವ ಅಗತ್ಯವಿಲ್ಲ. ನಗರಸಭೆ ನಿಮ್ಮ ಜೊತೆ ಇರುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಸವಿತಾ ವಾಸು ಮಾತನಾಡಿ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಅವಕಾಶವಿದ್ದು, ಸೂರು ಇಲ್ಲದವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯರಾದ ವಿ.ಮಹೇಶ್, ಮಧುಮಾಲತಿ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ರವಿಕುಮಾರ್, ಸಬೀನಾ ತನ್ವೀರ್, ಸಬಾನಾ, ಕುಸುಮ ಸುಬ್ಬಣ್ಣ, ಅರವಿಂದ ರಾಯ್ಕರ್, ನಗರಸಭೆಯ ಬಾಲಚಂದ್ರ, ಮದನ್ ಇನ್ನಿತರರು ಹಾಜರಿದ್ದರು.
ಅಡಿಕೆ ಕೊಳೆರೋಗಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು
‘ಹೋಂ ಸ್ಟೇ ನಿರ್ಮಾಣ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ