ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲೇ ಕಲ್ಲುಕ್ವಾರೆ ನಡೆಯುತ್ತಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಲ್ಲುಕ್ವಾರಿ ನಡೆಸುತ್ತಿದ್ದಾರೆ. ಅದನ್ನು ತಕ್ಷಣದಿಂದ ನಿಲ್ಲಿಸಿ, ಆ ಸರ್ಕಾರಿ ಭೂಮಿಯನ್ನು ಗೋಶಾಲೆಗಾಗಿ ಮೀಸಲಿಡಿ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಕೆಡಿಪಿ ಸಭೆಯಲ್ಲೇ ಖಡಕ್ ಆದೇಶ ಮಾಡಿದ್ರು. ಆದ್ರೇ ಸಾಗರ ತಾಲೂಕು ಆಡಳಿತ ಮಾತ್ರ, ಅದರ ಗೋಜಿಗೇ ಹೋಗಿಲ್ಲ. ಕಲ್ಲುಕ್ವಾರಿ ಬಂದ್ ಮಾಡಿಸಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸೋ ಕೆಲಸ ಮಾತ್ರ ಈವರೆಗೆ ಆಗಿಲ್ಲ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಬಳಿಯ ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರೋಬ್ಬರಿ 48 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದಿದ್ದಂತ ಸಾಗರ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕೂಡಲೇ ಆ ಕೆಲಸ ಮಾಡಬೇಕು. ಆ ಭೂಮಿಯನ್ನು ಗೋಶಾಲೆಗೆ ಮೀಸಲಿಡಬೇಕು. ಒತ್ತುವರಿ ಮಾಡಿರೋರು ಯಾರೇ ಬಲಾಢ್ಯರಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡು, ತೆರವು ಮಾಡುವಂತೆ ಖಡಕ್ ಆದೇಶ ಮಾಡಿದ್ದರು. ಯಾರೋ ಒಂದಿಬ್ಬರು ಪ್ರತಿಭಟನೆ ಮಾಡುತ್ತಾರೆ ಅಂತ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡದೇ ಇರೋದಕ್ಕೆ ಆಗೋದಿಲ್ಲ. ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಂತ ಭೂಮಿ ಅದಾಗಿದೆ. ತಹಶೀಲ್ದಾರರು ಕೂಡಲೇ ಸ್ಥಳಕ್ಕೆ ತೆರಳಿ, ತೆರವು ಕಾರ್ಯ ಮಾಡುವಂತೆ ತಿಳಿಸಿದ್ದರು.
ಶಾಸಕ ಬೇಳೂರು ಗೋಪಾಲಕೃಷ್ಣ ಆದೇಶಿಸಿ 15 ದಿನಗಳೇ ಕಳೆದರೂ, ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವಂತ ಕಲ್ಲುಕ್ವಾರಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸೋ ಕೆಲಸ ಮಾಡಿಲ್ಲ. ಸರ್ಕಾರಿ ಭೂಮಿಯಲ್ಲಿ ಹೆಗ್ಗಿಲ್ಲದೇ ಜಂಬಿಟ್ಟಿಗೆಯನ್ನು ತೆಗೆಯಲಾಗುತ್ತಿದೆ. ಅಲ್ಲದೇ ಅಲ್ಲಲ್ಲಿ ಕಾಡು ಕಡಿದು, ಜಮೀನು ಮಾಡಲಾಗುತ್ತಿದೆ.
ಹಾಗಾದ್ರೇ ಸರ್ಕಾರಿ ಭೂಮಿ ಒತ್ತುವರಿಗೆ ಯಾಕಿಷ್ಟು ಮೀನಾಮೇಷ? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಏನಾದ್ರೂ ಬಲಾಢ್ಯರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಈ ಕೂಡಲೇ ಬರೋಬ್ಬರಿ 48 ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಅಕ್ರಮವಾಗಿ ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರೋ ಕಲ್ಲುಕ್ವಾರಿಯನ್ನು ಬಂದ್ ಮಾಡಿಸಿ, ಆ ಜಾಗವನ್ನು ಗೋಶಾಲೆಗೆ ಮೀಸಲಿಡಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಬಗ್ಗೆ ಸಾಗರ ತಾಲ್ಲೂಕು ಕಂದಾಯ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕ್ರಮ ವಹಿಸಿ, ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ಗೋಶಾಲೆಗೆ ಜಾಗವನ್ನು ಮೀಸಲಿಡೋ ಕೆಲಸ ಮಾಡುತ್ತಾ ಅಂತ ಕಾದು ನೋಡಬೇಕಿದೆ.
ರಾಜ್ಯದ ‘ಕುರಿಗಾಯಿ’ಗಳಿಗೆ ಗುಡ್ ನ್ಯೂಸ್: ‘ದೌರ್ಜನ್ಯ ತಡೆ’ಗೆ ವಿಶೇಷ ಕಾಯ್ದೆ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ