ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಮಾನ್ಯವಾಗಿ ಎಣ್ಣೆಯಲ್ಲಿ ಮಾಡಿದ ಪದಾರ್ಥಗಳನ್ನು ತಿಂದ ನಂತರ ಹೆಚ್ಚಿನವರಿಗೆ ಹೊಟ್ಟೆಯುಬ್ಬರ, ಹೊಟ್ಟೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಇಂತಹ ಸಮಸ್ಯೆಯಿಂದ ಪಾರಾಗಲು ಕೆಲವು ಟಿಪ್ಸ್ ಗಳಿವೆ .
ಎಣ್ಣೆಯುಕ್ತ ಆಹಾರಗಳು ಅಥವಾ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸಲು ಹೆಚ್ಚಿನರು ತುಂಬಾ ಇಷ್ಟಪಡುತ್ತಾರೆ. ಆದರೆ ಅದನ್ನುತಿಂದ ನಂತರ ಅಜೀರ್ಣ, ಹೊಟ್ಟೆಭಾರ ಮತ್ತು ಹೊಟ್ಟೆಯಲ್ಲಿ ಸುಡುವ ಅನುಭವ ಉಂಟಾಗುತ್ತದೆ. ಇವೆಲ್ಲಾ ಅತಿಯಾದ ಎಣ್ಣೆ ಮತ್ತು ಮಸಾಲೆಗಳಿಂದ ಉಂಟಾಗುತ್ತದೆ.
ಆಯುರ್ವೇದದ ಪ್ರಕಾರ, ಹುರಿದ ಜೀರಿಗೆಯೊಂದಿಗೆ ಮೊಸರು ಸೇರಿಸಿ ಊಟದ ನಂತರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರೋಬಯಾಟಿಕ್ಸ್ ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ಆಮ್ಲೀಯತೆಯನ್ನು ತಡೆಗಟ್ಟಲು ಮತ್ತು ಸರಿಯಾದ ಕರುಳಿನ ಚಲನೆಯನ್ನು ಹೆಚ್ಚಿಸಲು ಈ ಪ್ರಕ್ರಿಯೆ ಸಹಾಯ ಮಾಡುತ್ತದೆ.
ಗ್ರೀನ್ ಟೀ ಸೇವನೆ ಮಾಡುವುದು ಒಳ್ಳೆಯದು ನೀರಿನ ಬದಲಾಗಿ ನೀವು ಆಯ್ಕೆ ಮಾಡಬಹುದಾದ ಮತ್ತೊಂದು ಪಾನೀಯವೆಂದರೆ ಅದು ಗ್ರೀನ್ ಟೀ. ಇದು ಫ್ಲೇವನಾಯ್ಡ್‌ನಲ್ಲಿ ಸಮೃದ್ಧವಾಗಿದ್ದು ಉತ್ಕರ್ಷಣ ನಿರೋಧಕಗಳನ್ನು ಸೇರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲಿನ ಆಕ್ಸಿಡೇಟಿವ್ ಲೋಡ್ ಅನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ.
ಜಿಡ್ಡಿನ ಆಹಾರ ಅಂದರೆ ಎಣ್ಣೆ ಭರಿತ ಆಹಾರ ಸೇವನೆ ಮಾಡಿದರೂ ಇಲ್ಲದಿದ್ದರೂ ಕೂಡ ಊಟದ ಬಳಿಕ 1000 ಹೆಜ್ಜೆ ನಡಿಗೆಯು ಯಾವಾಗಲೂ ಒಳ್ಳೆಯದು .ಊತ ಆದ ನಂತರ ನಡೆಯುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ ಮತ್ತು ಚಯಾಪಚಯವನ್ನು ಉತ್ತೇಜಿಸುತ್ತದೆ.