ಬೆಂಗಳೂರು: ಕೊಲೆ ಆರೋಪದ ಮೇಲೆ ಸದ್ಯ ನಟ ದರ್ಶನ್ ಅವರು ತಮ್ಮ ಗ್ಯಾಂಗ್ ಜೊತೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದ ಹಿನ್ನಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ನಡುವೆ ನಟ ದರ್ಶನ್ ಜೈಲಿನಲ್ಲಿ ನಿದ್ದ ಇಲ್ಲದೇ ದಿನ ಕಳೆಯುತ್ತಿದ್ದಾರೆ ಎನ್ನಲಾಗಿದ್ದು, ಜೈಲಿನ ಊಟಕ್ಕೆ ಅವರಿಗೆ ರುಚಿಸುತ್ತಿಲ್ಲ ಎನ್ನಲಾಗಿದೆ. ದಿನ ನಿತ್ಯ ನಟ ದರ್ಶನ್‌ಗೆ ಹೊರಗೆ ಇದ್ದಾಗ ಚಿಕನ್ ಬಿರಿಯಾನಿ, ಕಬಾಬ್, ಮದ್ಯ ಇರಲೇ ಬೇಕಾಗಿತ್ತು, ಆದರೆ ಈಗ ನಟ ದರ್ಶನ್ ಪ್ರತಿ ದಿನ ಜೈಲಿನಲ್ಲಿ ನೀಡುವ ಆಹಾರವನೇ ತಿನ್ನಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಬ್ಯಾರಕ್‌ನಲ್ಲಿ ಯಾರೊಂದಿಗೆ ಮಾತನಾಡದ ದರ್ಶನ್ ತಮ್ಮ ಪಾಡಿಗೆ ತಾವಿದ್ದು, ಚಡಪಡಿಸುತ್ತ ಓಡಾಡುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಸಿಬ್ಬಂದಿ ನೀಡಿದ್ದಾರೆ, ಕೊಟ್ಟಿರುವುದನ್ನು ತಿಂದು ದರ್ಶನ್ ನಿನ್ನೆ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ.
*ಸಾಂದರ್ಭಿಕ ಚಿತ್ರ