ರಾಯಚೂರು: ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಬಿಸಿ ಬಿಸಿಯಾಗಿ ರಾಜ್ಯದಲ್ಲಿ ಕಾವೇರಿದೆ. ಆದರೇ ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಪಕ್ಷ ಏನು ಹೇಳುತ್ತದೆಯೋ ಅದರಂತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತೀವಿ ಎಂಬುದಾಗಿ ನಾನು ಸಿಎಂ ಸಿದ್ಧರಾಮಯ್ಯಗೆ ಹೇಳಿದ್ದೇನೆ. ಅದಕ್ಕೆ ನಾನು ಬದ್ಧ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಿ. ಅದರ ಬಗ್ಗೆ ನನ್ನ ಕೇಳಿದ್ರೆ ನಾನು ಏನು ಹೇಳಲಿ ಎಂಬುದಾಗಿ ಹೇಳಿದರು.
ನನಗೆ ಕಾಂಗ್ರೆಸ್ ಪಕ್ಷ ಎಲ್ಲಾ ಕೊಟ್ಟಿದೆ. ಅಧ್ಯಕ್ಷನಾಗಿದ್ದೇನೆ, ಡಿಸಿಎಂ ಆಗಿ ಇತಿಹಾಸ ಬರೆಯುತ್ತಿದ್ದೇನೆ. ದೊಡ್ಡ ದೊಡ್ಡ ಕೆಲಸ ನಿಭಾಯಿಸಿದ್ದೇನೆ. ನೀರಾವರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುತ್ತೇನೆ. ಮಹದಾಯಿ, ಮೇಕೆದಾಟು ಹೋರಾಟ ಮಾಡಿದ್ದೇನೆ. ಪಕ್ಷ ನನಗೆ ಏನು ಕೊಡಬೇಕು ಎಲ್ಲಾ ಕೊಟ್ಟಿದೆ ಎಂಬುದಾಗಿ ತಿಳಿಸಿದರು.
ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಇಂಧನ ಸೋರಿಕೆ: ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ
BREAKING: ಉಗಾಂಡದಲ್ಲಿ ಭೀಕರ ಬಸ್ ಅಪಘಾತ: ಕನಿಷ್ಠ 63 ಜನರು ಸಾವು | Uganda Bus Tragedy