ಬೆಂಗಳೂರು : ರಾಜ್ಯದಲ್ಲಿ ಮೇ. 29 ರಿಂದ ಎಲ್ಲಾ ಸರ್ಕಾರಿ, ಅನುದಾನಿತ ಶಾಳೆಗಳು ಆರಂಭಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಖಾಸಗಿ ಶಾಲೆಗಳು ಆದೇಶ ಉಲ್ಲಂಘಿಸಿ ಅವಧಿಗೂ ಮುನ್ನವೇ ಶಾಲೆಗಳನ್ನು ಆರಂಭಿಸಿವೆ.
ರಾಜ್ಯಾದ್ಯಂತ ಮೇ. 29 ರಿಂದ ಎಲ್ಲಾ ಶಾಲೆಗಳು ಆರಂಭಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಶಿಕ್ಷಣ ಇಲಾಖೆಯ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ಬೆಂಳೂರಿನ ಹಲವು ಖಾಸಗಿ ಶಾಲೆಗಳು ಅವಧಿಗೂ ಮುನ್ನವೇ ಖಾಸಗಿ ಶಾಲೆಗಳನ್ನು ಆರಂಭಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಇಂದು ಬೆಂಗಳೂರಿನಲ್ಲಿ ಆಯೋಗದ ಅಧ್ಯಕ್ಷ ನಾಗನಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅವಧಿಗೂ ಮುನ್ನ ಆರಂಭಿಸಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.