ಧಾರವಾಡ : ಸಸ್ಯಹಾರಿಗಳಾದಂತ ಅವರು ಡೊಮಿನೊಸ್ ನಲ್ಲಿ ತಂದುರಿ ಪನೀರ ಪಿಜ್ಜಾ, ಪನೀರ್ ಟಿಕ್ಕಾ ಸ್ಟಫ್ಡ್‍ಗಾರ್ಲಿಕ್ ಬ್ರೇಡ್, ವೆಜ್‍ಜಿಂಗಿ ಪಾರ್ಸೆಲ್ ಹಾಗೂ ಚೀಸ್‍ಡಿಪ್ ಅನ್ನು ಆರ್ಡರ್ ಮಾಡಿದ್ದರು. ಆದರೇ ಮಾಂಸಹಾರ ಕಳುಹಿಸಲಾಗಿತ್ತು. ಇದನ್ನು ನೋಡದೇ ಆ ಕುಟುಂಬಸ್ಥರು ಸೇವಿಸಿಬಿಟ್ಟಿದ್ದರು. ಹೀಗಾಗಿ ಡೊಮಿನೋಸ್ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ದಂಡ, ಪರಿಹಾರಕ್ಕೆ ಆದೇಶಿಸಲಾಗಿದೆ.
ಧಾರವಾಡದ ವಿದ್ಯಾಗಿರಿಯ ನಿವಾಸಿ ಹಾಗೂ ವಿದ್ಯಾರ್ಥಿಯಾದ ಪ್ರದ್ಯುಮ್ನ ಇನಾಮದಾರ ಎನ್ನುವವರು ಎದುರುದಾರರ ಜಾಹಿರಾತನ್ನು ನೋಡಿ ಸಸ್ಯಹಾರಿ ಪದಾರ್ಥಗಳಾದ ಇಂಡಿ ತಂದುರಿ ಪನೀರ ಪಿಜ್ಜಾ, ಪನೀರ್ ಟಿಕ್ಕಾ ಸ್ಟಫ್ಡ್‍ಗಾರ್ಲಿಕ್ ಬ್ರೇಡ್, ವೆಜ್‍ಜಿಂಗಿ ಪಾರ್ಸೆಲ್ ಹಾಗೂ ಚೀಸ್‍ಡಿಪ್‍ನ್ನು ರೂ.555 ಪಾವತಿಸಿ ಆರ್ಡರ ಮಾಡಿದ್ದರು. ಅದು ಮನೆಗೆ ತಲುಪಿದ ನಂತರ ದೂರುದಾರರು ಅದನ್ನು ಸೇವಿಸಲು ಪ್ರಾರಂಭಿಸಿದರು. ನಂತರ ಅವರಿಗೆ ಅದು ಸಸ್ಯಹಾರಿ ಆಹಾರ ಅಲ್ಲದೇ ಅದು ಮಾಂಸಹಾರಿ ಪದಾರ್ಥ ಅನ್ನುವುದು ಗೊತ್ತಾಗಿದೆ. ಎದುರುದಾರರು ಕಳುಹಿಸಿದಂತಹ ವೆಜ್‍ಜಿಂಗಿ ಪಾರ್ಸೆಲ್ ಬಾಕ್ಸ್‍ನ ಮೇಲೆ ಹಸಿರು ಸ್ಟೀಕರ್ ಅಂಟಿಸಿದ್ದು ಆದರೆ ಅದರಲ್ಲಿ ಮಾಂಸಹಾರಿ ಪದಾರ್ಥ ಕಳುಹಿಸಿ ಅದನ್ನು ತಾನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತೆ ಆಗಿದೆ ಅಲ್ಲದೆ ತಪ್ಪು ಪಾರ್ಸೆಲ್ ಕಳುಹಿಸಿ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರುದಾರರು ಗ್ರಾಹಕರ ಆಯೋಗದ ಮುಂದೆ ದಿ: 01/01/2025 ರಂದು ದೂರನ್ನು ಸಲ್ಲಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ವಿದ್ಯಾರ್ಥಿಯಾಗಿದ್ದು ಸಂಪೂರ್ಣ ಸಸ್ಯಹಾರಿ ಆಗಿರುತ್ತಾನೆ. ಅದೇ ರೀತಿ ಎದುರುದಾರರ ಸಸ್ಯಹಾರಿಯ ಆಹಾರ ಪದಾರ್ಥದ ವಿದ್ಯ್ನಾಪಣೆಗಳನ್ನು ನೋಡಿ ರೂ.555 ಪಾವತಿಸಿ ಮೇಲೆ ಹೇಳಿದ ಪದಾರ್ಥಗಳನ್ನು ಆರ್ಡರ್ ಮಾಡಿರುತ್ತಾರೆ. ದೂರುದಾರರು ಅದು ಸಸ್ಯಹಾರ ಪದಾರ್ಥ ಅಂತಾ ತಿಳಿದು ಅದನ್ನು ಸೇವಿಸಿರುತ್ತಾರೆ. ಬೇರೆ ಅನುಭವ ಕಂಡು ಪದಾರ್ಥವನ್ನು ಸರಿಯಾಗಿ ವಿಕ್ಷಿಸಿದಾಗ ಅದು ಮಾಂಸಹಾರ ಪದಾರ್ಥ ಅನ್ನುವುದು ಕಂಡು ಬಂದಿರುತ್ತದೆ. ಅಲ್ಲದೆ ಆಯೋಗವು ದಾಖಲೆಗಳನ್ನು ಪರಿಶೀಲಿಸಿದಾಗ ಎದುರುದಾರರು ಆರ್ಡರ್ ಮಾಡಿದ್ದ ಪದಾರ್ಥಗಳನ್ನು ಕಳುಹಿಸದೇ ತಪ್ಪಾಗಿ ಮಾಂಸಹಾರ ಪದಾರ್ಥವನ್ನು ದೂರುದಾರರಿಗೆ ಕಳುಹಿಸಿರುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದ ಆಯೋಗ ಎದುರುದಾರರ ನಿರ್ಲಕ್ಷತನದಿಂದ ದೂರುದಾರರು ಮಾಂಸಹಾರವನ್ನು ಸೇವಿಸುವ ಪರಿಸ್ತಿತಿ ಬಂದಿರುವುದು ಕಂಡುಬರುತ್ತದೆ. ಅಲ್ಲದೆ ಎದುರುದಾರರು ತಾವು ಹೊರಡಿಸಿದ ಜಾಹಿರಾತು ಹಾಗೂ ಶಿಸ್ತಿನ ಆಹಾರ ಪದಾರ್ಥ ಮತ್ತು ಅದರ ವಿತರಣೆಯ ಅಂಶಗಳನ್ನು ಗಮನದಲ್ಲಿಟ್ಟು ಕೆಲಸ ಮಾಡದೆ ಸೇವಾ ನ್ಯೂನ್ಯತೆ ಎಸಗಿರುವುದ ಕಂಡು ಬಂದು ದೂರುದಾರರಿಗೆ ಆಗಿರುವ ಮಾನಸೀಕ ತೊಂದರೆ ಹಾಗೂ ಅನಾನುಕೂಲಕ್ಕೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000 ಕೊಡುವಂತೆ ಎದುರುದಾರರಾದ ಡಾಮಿನೋಸ್ ಪಿಜ್ಜಾಗೆ ಆದೇಶಿಸಿದೆ.
ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!