ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಅವರಣದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಚಿತ್ರಗಳಲ್ಲಿ, ನಾಯಿಯೊಂದು ಮನುಷ್ಯನ ಕತ್ತರಿಸಿದ ಕೈಯನ್ನು ಬಾಯಿಯಲ್ಲಿ ಇಟ್ಟುಕೊಂಡು ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಕಾಣಬಹುದು. . ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೆಜಿಎಂಯು ಆಡಳಿತವು ತನಿಖೆಗೆ ಆದೇಶಿಸಿದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಚಿತ್ರವನ್ನು ಸೆರೆಹಿಡಿದ ನಿಖರವಾದ ದಿನಾಂಕ ಅಥವಾ ಸಮಯ ಅಥವಾ ಚಿತ್ರವನ್ನು ಯಾರು ಸೆರೆಹಿಡಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಜಿಎಂಯುನ ಶತಾಬ್ದಿ ಎರಡನೇ ಹಂತದಲ್ಲಿ ಈ ಘಟನೆ ವರದಿಯಾಗಿದೆ ಎಂದು ದೃಢಪಡಿಸಲಾಗಿದೆ. ವರದಿಗಳ ಪ್ರಕಾರ, ರೋಗಿಗಳ ಕತ್ತರಿಸಿದ ದೇಹದ ಭಾಗಗಳನ್ನು ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯದಿಂದಾಗಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಚಿತ್ರಗಳಿಗೆ, ನೆಟ್ಟಿಗರು ಕೆಜಿಎಂಯು ಆಡಳಿತವನ್ನು ಟೀಕಿಸುವ ಸರಣಿ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಅವರ ಹಲವಾರು ಅನುಭವಗಳನ್ನು ಬೆಳಕಿಗೆ ತಂದಿದ್ದಾರೆ.
लखनऊ के केजीएमयू की ये दो तस्वीरे दिल दहला रही हैं। इंसान का कटा हाथ कुत्ता लेकर परिसर में लेकर घूम रहा है। यह मानवाधिकार आयोग का उल्लंघन है।
Source: Rajneesh Rastogi pic.twitter.com/lR4aoZp2Yg
— Rajeev Mullick 🇮🇳 (@rmulko) March 15, 2024