ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖಂಡ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಬಹುಮತದ ಗಡಿ ದಾಟಲು ವಿಫಲವಾದರೆ ಬಿಜೆಪಿ ಪ್ಲಾನ್ ಬಿ ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಪ್ಲಾನ್ ಎ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಒಂದು ವೇಳೆ ಬಿಜೆಪಿ ಬಹುಮತ ಗಳಿಸದಿದ್ದರೆ ಪ್ಲಾನ್ ಬಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ಲಾನ್ ಎ ಯಶಸ್ಸಿನ ಸಾಧ್ಯತೆ ಶೇ.60ಕ್ಕಿಂತ ಕಡಿಮೆ ಇರುವಾಗ ಮಾತ್ರ ಪ್ಲಾನ್ ಬಿ ಬಗ್ಗೆ ಯೋಚಿಸಬೇಕು ಎಂದು ಹೇಳಿದರು. “ಪ್ಲಾನ್ ಎ ಯಶಸ್ವಿಯಾಗಲು 60% ಕ್ಕಿಂತ ಕಡಿಮೆ ಅವಕಾಶವಿದ್ದಾಗ ಮಾತ್ರ ಪ್ಲಾನ್ ಬಿ ಮಾಡಬೇಕಾಗುತ್ತದೆ. ಪ್ರಧಾನಿ ಮೋದಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಾತ್ರಿಯಿದೆ.” ಎಂದು ಅಮಿತ್ ಶಾ ಹೇಳಿದರು.
ಜೂನ್ 4 ರಂದು ಬಿಜೆಪಿ 272 ಮ್ಯಾಜಿಕ್ ಸಂಖ್ಯೆಯನ್ನು ದಾಟುವ ಸಾಧ್ಯತೆ ಇದೆ ಎಂದು ಅಮಿತ್ ಶಾ ಹೇಳಿದರು. ಜೂನ್ 4ರಂದು ಬಿಜೆಪಿ 272 ಸ್ಥಾನಗಳನ್ನು ದಾಟದಿದ್ದರೆ ಏನಾಗಬಹುದು? “ಅಂತಹ ಯಾವುದೇ ಸಾಧ್ಯತೆಗಳನ್ನು ನಾನು ನೋಡುತ್ತಿಲ್ಲ. 400+ ಗುರಿಯನ್ನು ಸಾಧಿಸುವ ಬಿಜೆಪಿಯ ಗುರಿಯ ಬಗ್ಗೆ ಮಾತನಾಡಿದ ಶಾ, ಈ ಸಂಖ್ಯೆಯು ದೇಶಕ್ಕೆ ಸ್ಥಿರ ಸರ್ಕಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.