ದೊಡ್ಡಬಳ್ಳಾಪುರ: ಜಿಲ್ಲೆಯ ಬಿಸುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಬ್ಲಾಕ್ ಬೋರ್ಡ್, ಅಂಗನವಾಡಿಗೆ ಹಾಸಿಗೆಗಳನ್ನು ವಿತರಣೆ ಮಾಡಲಾಯಿತು.
ದೊಡ್ಡ ಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಬಿಸುವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೆ ಕಪ್ಪು ಹಲಗೆಯನ್ನು ( ಬ್ಲಾಕ್ ಬೋರ್ಡನ್ನು ಮತ್ತು ಅಂಗನವಾಡಿ ಮಕ್ಜಳಿಗೆ ಹಾಸಿಗೆಯನ್ನು ಈ ಶಾಲೆಯ ಹಳೆಯ ವಿದ್ಯಾರ್ಥಿಳಿಂದ ವಿತರಣೆ ಮಾಡಲಾಯಿತು. ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕ ಕಲಿಕಾ ವಾತಾವರಣ ನಿರ್ಮಾಣದಲ್ಲಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ತಂಡ ಪ್ರೋತ್ಸಾಹಿಸಿದರು.
ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಮತ್ತು ಹಾಸಿಗೆಯನ್ನು ಗ್ರಾಮದ ಹಳೆಯ ವಿದ್ಯಾರ್ಥಿಯಾದ ಸಂಪತ್ ಕುಮಾರ್ ಅವರು ನೀಡಿದರು.
ಬಿಸುವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಅವಶ್ಯಕವಾಗಿ ಬೇಕಾಗಿದ್ದ ಬ್ಲಾಕ್ ಬೋರ್ಡು ( ಕಪ್ಪು ಹಲಗೆ) ಯನ್ನು ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ.ಸಿ, ವಿನೋದ್ ಕುಮಾರ್, ಶಶಿಕುಮಾರ್.ಜಿ, ಮುನಿರಾಜ್.ಡಿ, ಮೋಹನ್.ಎನ್ ಮತ್ತು ಆನಂದ.ಎನ್ ಅವರು ನೀಡಿದರು.
ಈ ಕಾರ್ಯಕ್ರಮದಲ್ಲಿ ಜನಧ್ವನಿ ವೇದಿಕೆಯ ಮುಖಂಡರಾದ ನಾರಾಯಣ ಸ್ವಾಮಿ, ಗ್ರಾಮದ ಮುಖಂಡರಾದ ವೆಂಕಟರಮಣಪ್ಪ, ಯಲ್ಲಪ್ಪ, ಲಕ್ಷ್ಮಣ , ಮಾರಪ್ಪ , ಮುನಿಯಲ್ಲಪ್ಪ, ಆಶಾ, ಮಂಜುಳ ಹಾಗೂ SDMC ಅಧ್ಯಕ್ಷ ಆಂಜಿನಪ್ಪ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಡಿ.ದೇವರಾಜ ಅರಸು ಜನಪರ ಕೊಡುಗೆಗಳು ಮಾದರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ